ಇರಾನ್ ಮೇಲಿನ ಸತತ ಮೂರನೇ ದಿನದ ನಿಗದಿತ ಮಿಲಿಟರಿ ದಾಳಿಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ರದ್ದುಗೊಳಿಸಿದ್ದು, ಟೆಹ್ರಾನ್ ಜೊತೆಗಿನ ಐತಿಹಾಸಿಕ ಶಾಂತಿ ಒಪ್ಪಂದ ಅಂತಿಮ ಹಂತಕ್ಕೆ ತಲುಪಿದೆ ಎಂದು ಘೋಷಿಸಿದ್ದಾರೆ.
ಶ್ವೇತಭವನದ ಮಾತನಾಡಿದ ಅಧ್ಯಕ್ಷ ಟ್ರಂಪ್, ಒಪ್ಪಂದಕ್ಕೆ ಎರಡೂ ಕಡೆಯವರು ಒಪ್ಪಿಗೆ ಸೂಚಿಸಿದ್ದಾರೆ. ಶೀಘ್ರದಲ್ಲೇ ಒಪ್ಪಂದಕ್ಕೆ ಸಹಿ ಹಾಕುವ ಸಮಯ ಮತ್ತು ಸ್ಥಳವನ್ನು ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ.
ಮತ್ತೊಂದೆಡೆ, ಅಮೆರಿಕದೊಂದಿಗಿನ ಈ ತಿಳಿವಳಿಕೆ ಒಪ್ಪಂದದ ಪ್ರಸ್ತಾವನೆಯು ಇರಾನ್‌ನ ಉನ್ನತ ನಾಯಕರ ಸಕಾರಾತ್ಮಕ ಪರಿಗಣನೆಯಲ್ಲಿದೆ ಎಂದು ಟೆಹ್ರಾನ್‌ನ ಹಿರಿಯ ಅಧಿಕಾರಿಗಳು ದೃಢಪಡಿಸಿದ್ದಾರೆ. ಯುದ್ಧ ಮತ್ತು ಆರ್ಥಿಕ ನಿರ್ಬಂಧಗಳಿಂದಾಗಿ ತೀವ್ರ ಕಷ್ಟ ಅನುಭವಿಸುತ್ತಿದ್ದ ಇರಾನ್‌ನ ಸಾಮಾನ್ಯ ನಾಗರಿಕರು ಈ ಶಾಂತಿ ಸುದ್ದಿಯಿಂದ ನಿರಾಳರಾಗಿದ್ದಾರೆ.
ಇದನ್ನೂ ಓದಿ : ಪ್ರಧಾನಿ ಮೋದಿ ಭೇಟಿಯಾದ ಡಿಕೆಶಿ – ಪಿಎಂಗೆ 18 ಬೇಡಿಕೆಗಳ ಅಹವಾಲು ಸಲ್ಲಿಸಿದ ಸಿಎಂ!
Author: Btv Kannada
Post Views: 885








