ಕಾಂಗ್ರೆಸ್​​ ಶಾಸಕ ಕೆ.ಷಡಕ್ಷರಿ ಆರೋಗ್ಯ ಸ್ಥಿತಿ ಗಂಭೀರ – ದೆಹಲಿಯ ಆಸ್ಪತ್ರೆಗೆ ದಾಖಲು!

ತಿಪಟೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ K ಷಡಕ್ಷರಿ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಾಣಿಸಿಕೊಂಡಿದ್ದು, ದೆಹಲಿಯ‌ ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ದೆಹಲಿಯಲ್ಲಿ ವರಿಷ್ಠರ ಭೇಟಿಗೆ ತೆರಳಿದ್ದ ವೇಳೆಯೇ ಶಾಸಕ K ಷಡಕ್ಷರಿ ಅಸ್ವಸ್ಥರಾಗಿದ್ದು, ಅವರನ್ನು ತಕ್ಷಣ ಡಾ.ಜಿ.ಪರಮೇಶ್ವರ್, ಆರ್.ರಾಜೇಂದ್ರ ಸೇರಿ ನಾಯಕರು ಆಸ್ಪತ್ರೆಗೆ ಸೇರಿಸಿದ್ದಾರೆ.

ತಿಪಟೂರಿನ ಜನಪ್ರತಿನಿಧಿಯಾಗಿರುವ ಷಡಕ್ಷರಿ ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ಚುರುಕಾಗಿ ಕೆಲಸ ಮಾಡುತ್ತಿದ್ದರು. ಮಂತ್ರಿ ಸ್ಥಾನಕ್ಕಾಗಿ ಅವರು ಪ್ರಯತ್ನಿಸುತ್ತಿದ್ದರೆಂಬುದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ, ದೆಹಲಿಗೆ ತೆರಳಿ ಪಕ್ಷದ ವರಿಷ್ಠ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಲು ಮುಂದಾಗಿದ್ದರು. ಇಂತಹ ಸಂದರ್ಭದಲ್ಲಿ ಅಚಾನಕ್​ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ.

ಇದನ್ನೂ ಓದಿ : ಜೈಶ್ ನಿರ್ದೇಶನದ ‘ಲವ್ ಕೇಸ್’ ಶೂಟಿಂಗ್ ಕಂಪ್ಲೀಟ್!

Btv Kannada
Author: Btv Kannada

Leave a Comment