ಬೆಂಗಳೂರು : ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ವಿರುದ್ಧ ಈಗಾಗಲೇ ಎಸ್ಐಟಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಈ ಬೆನ್ನಲ್ಲೇ ನಲಪಾಡ್ಗೆ ಮೂರನೇ ಬಾರಿಗೆ ಸಮನ್ಸ್ ಜಾರಿಯಾಗಿದೆ.
ಈ ಹಿಂದೆ ಎರಡು ಬಾರಿ ಇಡಿ ವಿಚಾರಣೆಗೆ ನಲಪಾಡ್ ಹಾಜರಾಗಿರಲಿಲ್ಲ. ಸರ್ಕಾರ ರಚನೆಯ ನೆಪವೊಡ್ಡಿ ಗೈರಾಗಿದ್ದರು. ಈಗ ಮೂರನೇ ಬಾರಿಗೆ ಸಮನ್ಸ್ ಜಾರಿಯಾಗಿದ್ದು, ಈ ಬಾರಿ ಹಾಜರಾಗದಿದ್ದರೆ ನಲಪಾಡ್ಗೆ ಸಂಕಷ್ಟ ಎದುರಾಗಲಿದೆ.
ಚಾರ್ಜ್ ಶೀಟ್ನಲ್ಲಿ ನಲಪಾಡ್, ಶ್ರೀಕಿ ಮತ್ತು ರಾಬಿನ್ ಸೇರಿದಂತೆ ಕೆಲವರ ಹೆಸರನ್ನು ಉಲ್ಲೇಖಿಸಲಾಗಿದೆ. ಬಿಟ್ ಕಾಯಿನ್ ನಗದೀಕರಣಕ್ಕೆ ಸಂಬಂಧಿಸಿದಂತೆ ನಲಪಾಡ್ ಹಣ ಪಡೆದಿದ್ದಾರೆ ಮತ್ತು ಕಮಿಷನ್ ಪಡೆದಿದ್ದಾರೆ ಎಂದು ಚಾರ್ಜ್ ಶೀಟ್ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ : ಮಹಿಳೆಯರಿಗೆ ಗುಡ್ನ್ಯೂಸ್ – ಉಚಿತ ಬಸ್ ಪ್ರಯಾಣಕ್ಕಾಗಿ ಶೀಘ್ರವೇ `ಶಕ್ತಿ ಸ್ಮಾರ್ಟ್ ಕಾರ್ಡ್’ ವಿತರಣೆ!
Author: Btv Kannada
Post Views: 501








