Download Our App

Follow us

Home » ರಾಜಕೀಯ » ಒಬ್ಬೊಬ್ಬ MLAಗೆ 50 ಕೋಟಿಯಲ್ಲ.. 100 ಕೋಟಿ ಆಫರ್​​ – ರವಿಕುಮಾರ್​ ಗೌಡ ಬಿಗ್​ ಬಾಂಬ್​..!

ಒಬ್ಬೊಬ್ಬ MLAಗೆ 50 ಕೋಟಿಯಲ್ಲ.. 100 ಕೋಟಿ ಆಫರ್​​ – ರವಿಕುಮಾರ್​ ಗೌಡ ಬಿಗ್​ ಬಾಂಬ್​..!

ಮಂಡ್ಯ : ಉಪಚುನಾವಣೆಯ ಬಹಿರಂಗ ಪ್ರಚಾರ ಮುಗಿದ ಬೆನ್ನಲ್ಲೇ, ಖುದ್ದು ಮುಖ್ಯಮಂತ್ರಿಗಳೇ ಗಂಭೀರ ಆರೋಪವನ್ನು ಮಾಡಿದ್ದರು. ಸರ್ಕಾರ ಪತನಗೊಳಿಸಲು ಬಿಜೆಪಿಯು, 50 ಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿಯ ಆಮಿಷವನ್ನು ನೀಡಿದೆ ಎಂದು ಹೇಳಿದ್ದರು. ಇದೀಗ ಈ ಬಗ್ಗೆ MLA ರವಿಕುಮಾರ್​ ಗೌಡ ಪ್ರತಿಕ್ರಿಯಿಸಿ, ಒಬ್ಬೊಬ್ಬ MLAಗೆ 50 ಕೋಟಿಯಲ್ಲ 100 ಕೋಟಿ ಆಫರ್​​ ನೀಡಿದ್ದರು ಎಂದು ಬಿಗ್ ಬಾಂಬ್ ಸಿಡಿಸಿದ್ದಾರೆ.

ಈ ಬಗ್ಗೆ ಮಂಡ್ಯದಲ್ಲಿ MLA ರವಿಕುಮಾರ್​ ಗೌಡ ಮಾತನಾಡಿ, ಬಿಜೆಪಿ ನಾಯಕರಿಂದ ತಲಾ 100 ಕೋಟಿ ಆಫರ್​​​, 50 ಕಾಂಗ್ರೆಸ್​ MLAಗಳಿಗೆ 5000 ಕೋಟಿ ಆಮಿಷವೊಡ್ಡಿದ್ದರು. ಬಿಜೆಪಿ ನಾಯಕರೇ ಭೇಟಿ ಮಾಡಿ ಕಾಂಗ್ರೆಸ್ ಶಾಸಕರ ಖರೀದಿಗೆ 100 ಕೋಟಿ ಆಫರ್​​ ಕೊಟ್ಟಿದ್ದರು. ವಿಡಿಯೋ, ಆಡಿಯೋ ನಮ್ಮ ಬಳಿ ಇವೆ, ಮುಖ್ಯಮಂತ್ರಿಗಳು ಹೇಳಿದ್ದು ಸುಳ್ಳಲ್ಲ ನಿಜ. ಯಾರು ಭೇಟಿಯಾಗಿದ್ರು..? ಎಲ್ಲಿ ಭೇಟಿಯಾಗಿದ್ರು ರೆಕಾರ್ಡ್ ಇದೆ, ಸಮಯ, ಘಳಿಗೆ ನೋಡಿ ರಿಲೀಸ್​ ಮಾಡ್ತೇವೆ ಎಂದು ಹೇಳಿದ್ದಾರೆ. ಇನ್ನು ಯಾವುದೇ ಸಂದರ್ಭದಲ್ಲಿ ಬಿಜೆಪಿ ಆಪರೇಷನ್​ ವಿಡಿಯೋ ಸ್ಫೋಟ ಆಗುವ ಸಾಧ್ಯತೆಯಿದೆ ಅನ್ನೋ ಚರ್ಚೆಗಳು ನಡೆಯುತ್ತಿದೆ.

ಇದನ್ನೂ ಓದಿ : ತೆಲುಗು ಬಿಗ್ ಬಾಸ್ ಕಾದು.. ಕನ್ನಡ – ವೈಲ್ಡ್‌‌ ಕಾರ್ಡ್‌ ಸ್ಫರ್ಧಿ ಶೋಭಾ ಶೆಟ್ಟಿಗೆ ವೇದಿಕೆಯಲ್ಲೇ ಸುದೀಪ್ ಕ್ಲಾಸ್..!

Leave a Comment

DG Ad

RELATED LATEST NEWS

Top Headlines

RBI ಗವರ್ನರ್​ ಟು ಪ್ರಧಾನಿ ಆಗುವವರೆಗೆ.. ಡಾ.ಮನಮೋಹನ್ ಸಿಂಗ್​​ ನಡೆದು ಬಂದ ಹಾದಿಯೇ ರೋಚಕ..!

ಭಾರತದ ಕಂಡಂಥ ಅಪ್ರತಿಮ ನಾಯಕ, ಭಾರತದ ಆರ್ಥಿಕತೆಗೆ ಭದ್ರ ಬುನಾದಿ ಹಾಕಿದ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ವಿಧಿವಶರಾಗಿದ್ದಾರೆ. 92 ವರ್ಷ ವಯಸ್ಸಿನ ಡಾ.

Live Cricket

Add Your Heading Text Here