ಬಿಗ್ಬಾಸ್ ಸೀಸನ್ 11ರಲ್ಲಿ 50 ದಿನದ ಜರ್ನಿ ಮುಗಿದಿದೆ. ಈಗಾಗಲೇ ಅನುಷಾ ರೈ ದೊಡ್ಮನೆಯಿಂದ ಔಟ್ ಆಗಿದ್ದಾರೆ. ಹಾಗೇಯೇ ರಿಯಾಲಿಟಿ ಶೋಗಳ ಮೂಲಕ ಫೇಮಸ್ ಆದ ರಜತ್ ಮತ್ತು ಬಿಗ್ಬಾಸ್ ತೆಲುಗು ಖ್ಯಾತಿಯ ಶೋಭಾ ಶೆಟ್ಟಿ ದೊಡ್ಮನೆಯೊಳಗೆ ವೈಲ್ಡ್ ಕಾರ್ಡ್ ಸ್ಫರ್ಧಿಗಳಾಗಿ ಎಂಟ್ರಿ ಕೊಟ್ಟಿದ್ದಾರೆ.
ಇನ್ನು ವೇದಿಕೆ ಏರಿದಾಗ ಸುದೀಪ್ ಶೋಭಾ ಶೆಟ್ಟಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶೋಭಾ ಶೆಟ್ಟಿ ತೆಲುಗು ಬಿಗ್ಬಾಸ್ನಲ್ಲಿ ಈ ಮೊದಲು ಸ್ಪರ್ಧಿಸಿದ್ದರು. ಅಲ್ಲಿ ಆ್ಯಂಕರ್ ಅಕ್ಕಿನೇನಿ ನಾಗಾರ್ಜುನ. ಅವರು ನಿರೂಪಣೆಯನ್ನು ಚೆನ್ನಾಗಿಯೇ ಮಾಡುತ್ತಾರೆ. ಆದರೆ, ಸುದೀಪ್ ರೀತಿ ಖಡಕ್ ಆಗಿ ಅವರು ನಿರೂಪಣೆ ಮಾಡಿದ್ದು ಕಡಿಮೆ. ಹೀಗಾಗಿ, ಏನೇ ಮಾತನಾಡಿದರೂ ನಡೆಯುತ್ತದೆ ಎನ್ನುವ ಭಾವನೆ ಅಲ್ಲಿನ ಸ್ಪರ್ಧಿಗಳಿಗೆ ಮೂಡಿರುತ್ತದೆ. ಹೀಗೆ ಶೋಭಾ ಶೆಟ್ಟಿ ಅವರು ಸುದೀಪ್ ಎದುರು ಚಿಲ್ ಆಗಿ ವೇದಿಕೆಯಲ್ಲಿ ಮಾತನಾಡಿಕೊಂಡಿದ್ದರು. ಆದರೆ, ಅವರು ಯಾವಾಗ ಮಾತಿನಲ್ಲಿ ಲಯ ತಪ್ಪಿದರು ಎಂಬುದು ಗೊತ್ತಾಯಿತೋ ಆಗ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದರ ಬಿಸಿ ಶೋಭಾಗೆ ತಟ್ಟಿದೆ.
ಸುದೀಪ್ ಅವರು ಶೋಭಾ ಶೆಟ್ಟಿಗೆ ನಿಮ್ಮ ಫೇವರಿಟ್ ಸ್ಪರ್ಧಿ ಯಾರು ಅಂತ ಕೇಳಿದ್ದಾರೆ. ಆಗ ಸರಿಯಾದ ಪ್ರಶ್ನೆಗೆ ಸರಿಯಾಗಿ ಶೋಭಾ ಉತ್ತರ ನೀಡಿಲ್ಲ. ಅದೇ ವೇಳೆ ಸದೀಪ್ ಅವರು ‘ನಿಮ್ಮ ಪ್ರಶ್ನೆಯನ್ನು ನೀವೇ ಆಯ್ಕೆ ಮಾಡಿಕೊಳ್ಳಬೇಡಿ. ಇದು ತೆಲುಗು ಬಿಗ್ ಬಾಸ್ ಕಾದು ಪಕ್ಕಾ ಕನ್ನಡ. ಪ್ರಶ್ನೆ ನಮ್ಮದು, ಉತ್ತರ ಮಾತ್ರ ನಿಮ್ಮದು’ ಎಂದು ನಗುತ್ತಲೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಸೀಸನ್ 11ರ ಸ್ಪರ್ಧಿಗಳಲ್ಲಿ ನಿಮಗೆ ಟಫ್ ಸ್ಪರ್ಧಿ ಅಂತ ಯಾರು ಅನ್ನಿಸುತ್ತೆ ಎಂದಾಗ ಶೋಭಾ ಯಾರೂ ಇಲ್ಲ ಎಂದಿದ್ದಾರೆ. ಹಾಗಾದ್ರೆ ಕಪ್ ತೆಗೆದುಕೊಂಡು ಹೋಗಿಬಿಡಿ ಎಂದು ಕಿಚ್ಚ ಉತ್ತರಿಸಿದ್ದಾರೆ.
ಇದನ್ನೂ ಓದಿ : ಹಾವೇರಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಅವಘಡ – ಕಿತ್ತು ಬಂತು ಓರ್ವನ ಕಣ್ಣು.. 30ಕ್ಕೂ ಹೆಚ್ಚು ಮಂದಿಗೆ ಗಾಯ..!