ಮಂಡ್ಯ : ಉಪಚುನಾವಣೆಯ ಬಹಿರಂಗ ಪ್ರಚಾರ ಮುಗಿದ ಬೆನ್ನಲ್ಲೇ, ಖುದ್ದು ಮುಖ್ಯಮಂತ್ರಿಗಳೇ ಗಂಭೀರ ಆರೋಪವನ್ನು ಮಾಡಿದ್ದರು. ಸರ್ಕಾರ ಪತನಗೊಳಿಸಲು ಬಿಜೆಪಿಯು, 50 ಕಾಂಗ್ರೆಸ್ ಶಾಸಕರಿಗೆ ತಲಾ 50 ಕೋಟಿಯ ಆಮಿಷವನ್ನು ನೀಡಿದೆ ಎಂದು ಹೇಳಿದ್ದರು. ಇದೀಗ ಈ ಬಗ್ಗೆ MLA ರವಿಕುಮಾರ್ ಗೌಡ ಪ್ರತಿಕ್ರಿಯಿಸಿ, ಒಬ್ಬೊಬ್ಬ MLAಗೆ 50 ಕೋಟಿಯಲ್ಲ 100 ಕೋಟಿ ಆಫರ್ ನೀಡಿದ್ದರು ಎಂದು ಬಿಗ್ ಬಾಂಬ್ ಸಿಡಿಸಿದ್ದಾರೆ.
ಈ ಬಗ್ಗೆ ಮಂಡ್ಯದಲ್ಲಿ MLA ರವಿಕುಮಾರ್ ಗೌಡ ಮಾತನಾಡಿ, ಬಿಜೆಪಿ ನಾಯಕರಿಂದ ತಲಾ 100 ಕೋಟಿ ಆಫರ್, 50 ಕಾಂಗ್ರೆಸ್ MLAಗಳಿಗೆ 5000 ಕೋಟಿ ಆಮಿಷವೊಡ್ಡಿದ್ದರು. ಬಿಜೆಪಿ ನಾಯಕರೇ ಭೇಟಿ ಮಾಡಿ ಕಾಂಗ್ರೆಸ್ ಶಾಸಕರ ಖರೀದಿಗೆ 100 ಕೋಟಿ ಆಫರ್ ಕೊಟ್ಟಿದ್ದರು. ವಿಡಿಯೋ, ಆಡಿಯೋ ನಮ್ಮ ಬಳಿ ಇವೆ, ಮುಖ್ಯಮಂತ್ರಿಗಳು ಹೇಳಿದ್ದು ಸುಳ್ಳಲ್ಲ ನಿಜ. ಯಾರು ಭೇಟಿಯಾಗಿದ್ರು..? ಎಲ್ಲಿ ಭೇಟಿಯಾಗಿದ್ರು ರೆಕಾರ್ಡ್ ಇದೆ, ಸಮಯ, ಘಳಿಗೆ ನೋಡಿ ರಿಲೀಸ್ ಮಾಡ್ತೇವೆ ಎಂದು ಹೇಳಿದ್ದಾರೆ. ಇನ್ನು ಯಾವುದೇ ಸಂದರ್ಭದಲ್ಲಿ ಬಿಜೆಪಿ ಆಪರೇಷನ್ ವಿಡಿಯೋ ಸ್ಫೋಟ ಆಗುವ ಸಾಧ್ಯತೆಯಿದೆ ಅನ್ನೋ ಚರ್ಚೆಗಳು ನಡೆಯುತ್ತಿದೆ.
ಇದನ್ನೂ ಓದಿ : ತೆಲುಗು ಬಿಗ್ ಬಾಸ್ ಕಾದು.. ಕನ್ನಡ – ವೈಲ್ಡ್ ಕಾರ್ಡ್ ಸ್ಫರ್ಧಿ ಶೋಭಾ ಶೆಟ್ಟಿಗೆ ವೇದಿಕೆಯಲ್ಲೇ ಸುದೀಪ್ ಕ್ಲಾಸ್..!