ತುಷಾರ್ ಗಿರಿನಾಥ್ ಮತ್ತು ರಾಜೇಂದ್ರ ಚೋಳನ್​ಗೆ ಸಿಎಂ ಸಚಿವಾಲಯದಲ್ಲಿ ಉನ್ನತ ಹುದ್ದೆ!

ಬೆಂಗಳೂರು : ಸಿಎಂ ಡಿಕೆ ಶಿವಕುಮಾರ್ ಸಚಿವಾಲಯದಲ್ಲಿ ತುಷಾರ್ ಗಿರಿನಾಥ್ ಮತ್ತು ರಾಜೇಂದ್ರ ಚೋಳನ್​ಗೆ ಉನ್ನತ ಹುದ್ದೆ ನೀಡಲಾಗಿದೆ.

ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳಾದ ತುಷಾರ್ ಗಿರಿನಾಥ್ ಮತ್ತು ರಾಜೇಂದ್ರ ಚೋಳನ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಖ್ಯಮಂತ್ರಿಗಳ ಕಾರ್ಯಾಲಯದ (CMO) ಅತ್ಯುನ್ನತ ಹಾಗೂ ಪ್ರಮುಖ ಹುದ್ದೆಗಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ಅವರನ್ನು ನೇಮಿಸಲಾಗಿದೆ. ಅವರು ನಗರಾಭಿವೃದ್ಧಿ ಇಲಾಖೆಯಲ್ಲಿ ಸಹಾಯಕ ಮುಖ್ಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ. ಇನ್ನು ರಾಜ್ಯ ಸರ್ಕಾರ ರಾಜೇಂದ್ರ ಚೋಳನ್ ಅವರನ್ನು ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿಯೂ ನೇಮಿಸಿದೆ.

ಇದನ್ನೂ ಓದಿ : ಡಿಕೆಶಿ ಕ್ಯಾಬಿನೆಟ್​ನ ಸಚಿವರಾಗಿ 12 ಶಾಸಕರು ಪ್ರಮಾಣವಚನ ಸ್ವೀಕಾರ!

Btv Kannada
Author: Btv Kannada

Leave a Comment

Read More

Read More