Download Our App

Follow us

Home » ಸಿನಿಮಾ » ಬಳ್ಳಾರಿ ಜೈಲಿಗೆ ಆಗಮಿಸಿದ ದರ್ಶನ್​​ ಕುಟುಂಬಸ್ಥರು.. ಇಂದೇ ರಿಲೀಸ್ ಆಗ್ತಾರಾ ದಾಸ?

ಬಳ್ಳಾರಿ ಜೈಲಿಗೆ ಆಗಮಿಸಿದ ದರ್ಶನ್​​ ಕುಟುಂಬಸ್ಥರು.. ಇಂದೇ ರಿಲೀಸ್ ಆಗ್ತಾರಾ ದಾಸ?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಕಳೆದ ಸುಮಾರು ಐದು ತಿಂಗಳಿಂದಲೂ ಜೈಲಿನಲ್ಲಿ ದಿನ ದೂಡುತ್ತಿದ್ದ ನಟ ದರ್ಶನ್​ಗೆ ದೀಪಾವಳಿ ಶುಭ ತಂದಿದೆ. ದರ್ಶನ್​ಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಜಾಮೀನು ಮಂಜೂರು ಹಿನ್ನೆಲೆಯಲ್ಲಿ ದರ್ಶನ್ ಕುಟುಂಬಸ್ಥರು ಬಳ್ಳಾರಿಗೆ ಆಗಮಿಸಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್ ಹಾಗೂ ಆಪ್ತರು ಬಳ್ಳಾರಿಗೆ ಬಂದಿದ್ದಾರೆ. ಸದ್ಯ ದರ್ಶನ್​​ಗೆ ಬೇಲ್ ಸಿಗುತ್ತಿದ್ದಂತೆ ಅವರ ಅಭಿಮಾನಿಗಳಿಗೆ ದೀಪಾವಳಿಯ ದೊಡ್ಡ ಉಡುಗೊರೆ ಸಿಕ್ಕಂತೆ ಆಗಿದ್ದು, ಫುಲ್ ಖುಷಿಯಾಗಿದ್ದಾರೆ.

ದರ್ಶನ್​​ ಜೈಲು ಸೇರಿದ ದಿನದಿಂದಲೂ ಅಭಿಮಾನಿಗಳಂತೂ ದಾಸನನ್ನು ದೂರದಿಂದಲಾದ್ರು ನೋಡಲೆಂದೇ ಜೈಲಿಗೆ ಆಗಮಿಸುತ್ತಿದ್ದರು. ಅದರಲ್ಲೂ ದರ್ಶನ್ ಭೇಟಿಗಾಗಿ ಕುಟುಂಬಸ್ಥರು, ಸ್ನೇಹಿತರು ಬಂದಾಗ ಅಥವಾ ಕೋರ್ಟ್​ನಲ್ಲಿ ಬೇಲ್ ವಿಚಾರಣೆ ಬೇಳೆ ಜೈಲಿನ ಮುಂದೆ ಅಭಿಮಾನಿಗಳು ಜಮಾಯಿಸುತ್ತಿದ್ದರು. ದರ್ಶನ್ ಪರ ಜೈಕಾರ ಕೂಗುತ್ತಿದ್ದರು. ನಿತ್ಯ ಕೂಡ ದರ್ಶನ್ ಫ್ಯಾನ್ಸ್ ಸೆರೆಮನೆಯ ಸುತ್ತ ಸುಳಿದಾಡುತ್ತಿದ್ದರು.

ಇದೀಗ ಬೇಲ್​ ವಿಚಾರ ತಿಳಿಯುತ್ತಿದ್ದಂತೆ ದಾಸನ ಫ್ಯಾನ್ಸ್​​ಗಳು, ಬಳ್ಳಾರಿ ಜೈಲ್​​ಗೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಬಳ್ಳಾರಿ ಸೆಂಟ್ರಲ್​​ ಜೈಲ್​ ಬಳಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಈಗಾಗಲೇ ಭೇಟಿ ಹಿರಿಯ ಪೊಲೀಸ್ ಅಧಿಕಾರಿಗಳು ಬಳ್ಳಾರಿ ಜೈಲ್​ಗೆ ಭೇಟಿ ನೀಡಿದ್ದಾರೆ. ಇನ್ನು ಇಂದು ಸಂಜೆಯೇ ದರ್ಶನ್​ ರಿಲೀಸ್ ಆಗೋ ಸಾಧ್ಯತೆಯಿದ್ದು, ಹೀಗಾಗಿ ಭಾರೀ ಪ್ರಮಾಣದಲ್ಲಿ ಅಭಿಮಾನಿಗಳು ಸೇರುವ ಸಾಧ್ಯತೆ ಕಾಣುತ್ತಿದೆ. ಹೀಗಾಗಿ ಬಳ್ಳಾರಿ ಜೈಲ್​​ ಬಳಿ ಬ್ಯಾರಿಕೇಡ್​ ಹಾಕಿ ಪೊಲೀಸರು ಬಂದೋಬಸ್ತ್​ ಮಾಡಿದ್ದಾರೆ.

ಇದನ್ನೂ ಓದಿ : ದರ್ಶನ್​ಗೆ ದೀಪಾವಳಿ ಸಿಹಿ.. ಮಧ್ಯಂತರ ಜಾಮೀನು ನೀಡಿದ ಹೈಕೋರ್ಟ್..

Leave a Comment

DG Ad

RELATED LATEST NEWS

Top Headlines

ದರ್ಶನ್​​ಗೆ ಬೇಲ್​​​​ ಸಿಕ್ಕಿರೋ ಖುಷಿಯಲ್ಲಿ ರಚಿತಾ ರಾಮ್ – ಕಾಲಾಯ ತಸ್ಮೈ ನಮಃ ಅಂತಾ ವಿಡಿಯೋ ಶೇರ್ ಮಾಡಿದ ನಟಿ ​..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ದರ್ಶನ್​​ಗೆ ಬಿಗ್ ರಿಲೀಫ್ ಸಿಕ್ಕಿದ್ದು, 6 ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿ ಕೋರ್ಟ್ ಆದೇಶ ಹೊರಡಿಸಿದೆ. ಇದೀಗ

Live Cricket

Add Your Heading Text Here