ಮೈಸೂರು : ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಮುಡಾ ಮಾಜಿ ಆಯುಕ್ತರ ಮನೆಗಳ ಮೇಲೆ ಇಡಿ ದಾಳಿ ಮಾಡಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯನವರ ಪರಮಾಪ್ತ ರಾಕೇಶ್ ಪಾಪಣ್ಣ ಮನೆ ಮೇಲೆ ರೇಡ್ ಮಾಡಿದೆ. ಇಡಿ ಅಧಿಕಾರಿಗಳು ಇಂದೂ ರೇಡ್ ಮುಂದುವರೆಸಿದ್ದು, ಸತತ 12 ತಾಸು ವಿಚಾರಣೆ ನಡೆಸಿದರೂ ತನಿಖೆ ಮುಗಿದಿಲ್ಲ.
ಮುಡಾ 50:50 ಹಗರಣ ವಿಚಾರದಲ್ಲಿ ವಿಚಾರಣೆ ನಡೆಯುತ್ತಿದ್ದು, ಸಿಎಂ ಸಿದ್ದು ಆಪ್ತ ರಾಕೇಶ್ ಪಾಪಣ್ಣ ಮನೆಯಲ್ಲೂ ಶೋಧ ನಡೆಸುತ್ತಿದ್ದಾರೆ. ಇಡಿ ಅಧಿಕಾರಿಗಳು ಬೆಳಿಗ್ಗೆಯಿಂದ ದಾಖಲೆ ಪರಿಶೀಲನೆ ನಡೆಸುತ್ತಿದ್ದು, ರಾಕೇಶ್ ಪಾಪಣ್ಣ ಮುಡಾದಲ್ಲಿ 20ಕ್ಕೂ ಹೆಚ್ಚು ಸೈಟ್ ಪಡೆದಿದ್ದಾರೆ. ರಾಕೇಶ್ ಮನೆಯಲ್ಲಿ ED ಮಹತ್ವದ ದಾಖಲೆ ಕಲೆ ಹಾಕಿದ್ದು, ಇನ್ನೂ ಹೆಚ್ಚಿನ ದಾಖಲೆಗಾಗಿ ಹುಡುಕಾಟ ಮುಂದುವರೆದಿದೆ.
ಸಿದ್ದರಾಮಯ್ಯ ಜೊತೆ 40 ವರ್ಷದಿಂದ ರಾಕೇಶ್ ಒಡನಾಟವಿದೆ. ಹಿನಕಲ್ ಪಾಪಣ್ಣ ಕುಟುಂಬದ ಜೊತೆ ಸಿದ್ದು ಕೂಡ ಒಡನಾಟ ಹೊಂದಿದ್ದು, ರಾಕೇಶ್ ಪಾಪಣ್ಣ ವಿಚಾರಣೆ ಮಾಡುತ್ತಿದ್ದಂತೆ ಹಲವರಿಗೆ ನಡುಕ ಶುರುವಾಗಿದೆ. ರಾಕೇಶ್ ಪಾಪಣ್ಣ ನಟ ದರ್ಶನ್ ಸೇರಿ ಹಲವರಿಗೆ ಆಪ್ತರಾಗಿದ್ದು, ಇದೀಗ ಇಬ್ಬರು ಸಚಿವರು ಸೇರಿ ಹಲವು ದೊಡ್ಡವರಿಗೆ ಭಾರೀ ಟೆನ್ಷನ್ ಶುರುವಾಗಿದೆ. ರಾಕೇಶ್ 50-50 ಅಡಿ ಒಂದೇ ದಿನ 98,000 ಚ.ಮೀ ಮಂಜೂರು ಮಾಡಿಸಿದ್ದ. ಮುಡಾ ಇತಿಹಾಸದಲ್ಲೇ ಬೃಹತ್ ಮೊತ್ತದ ಜಾಗ ಮಂಜೂರಾಗಿದ್ದು, ರಾಕೇಶ್ಗೆ ಮುಡಾ ಆಯುಕ್ತರಾಗಿದ್ದ ಜಿ.ಟಿ. ದಿನೇಶ್ ಕುಮಾರ್ ಸಹಕರಿಸಿದ್ದಾರೆ. ರಾತ್ರೋರಾತ್ರಿ ಜಾಗ ಮಂಜೂರು ಮಾಡಿ ದಿನೇಶ್ ಟೈಟಲ್ ಕೊಡಿಸಿದ್ದ.
ಇದನ್ನೂ ಓದಿ : ಕೇರಳ ದೇಗುಲದಲ್ಲಿ ಪಟಾಕಿ ದುರಂತ – 150ಕ್ಕೂ ಹೆಚ್ಚು ಮಂದಿಗೆ ಗಾಯ..!