Download Our App

Follow us

Home » ಜಿಲ್ಲೆ » ಸೆಟಲ್​ಮೆಂಟ್​ ಮೂಲಕ ಕೋಟ್ಯಾಂತರ ರೂ. ಅಕ್ರಮ – ಮುಡಾ ಹಣಕಾಸು ವ್ಯವಹಾರದ ಮೊದಲ ವಿಡಿಯೋ ಬಿಟಿವಿಗೆ ಲಭ್ಯ..!

ಸೆಟಲ್​ಮೆಂಟ್​ ಮೂಲಕ ಕೋಟ್ಯಾಂತರ ರೂ. ಅಕ್ರಮ – ಮುಡಾ ಹಣಕಾಸು ವ್ಯವಹಾರದ ಮೊದಲ ವಿಡಿಯೋ ಬಿಟಿವಿಗೆ ಲಭ್ಯ..!

ಮೈಸೂರು : ಮುಡಾ ಹಗರಣದಲ್ಲಿ ಹಣಕಾಸಿನ ವ್ಯವಹಾರ ನಡೆದಿದ್ದು, ಮಧ್ಯವರ್ತಿ ಮೂಲಕ ಸೆಟಲ್ಮೆಂಟ್ ಡೀಡ್ ಮಾಡಿಕೊಂಡು ಕೋಟ್ಯಾಂತರ ರೂ. ಅಕ್ರಮ ನಡೆಸಿದ್ದಾರೆ. ಮುಡಾ ಹಣಕಾಸು ವ್ಯವಹಾರದ ಮೊದಲ ವಿಡಿಯೋ ಬಿಟಿವಿಗೆ ಲಭ್ಯವಾಗಿದೆ.

ಸೆಟಲ್ಮೆಂಟ್ ಡೀಡ್ ಮಾಡಿಕೊಂಡು ಶಿವಣ್ಣ ಎಂಬವವರಿಗೆ ವಂಚನೆ ಮಾಡಿದ್ದು, 30 ಲಕ್ಷ ಹಣ ಎಣಿಸುವ ವಿಡಿಯೋ ಗಂಗರಾಜು ಬಿಡುಗಡೆ ಮಾಡಿದ್ದಾರೆ. ಮೈಸೂರಿನ ಕಾರ್ತಿಕ್​​ ಲೇಔಟ್​ನ ಮಂಜುನಾಥ್ ಆಪ್ತ ಕೋಟ್ಯಾಂತರ ರೂ ಡೀಲ್ ಮಾಡಿದ್ದಾನೆ ಎಂದು RTI ಕಾರ್ಯಕರ್ತ ಗಂಗರಾಜು ಗಂಭೀರ ಆರೋಪ ಮಾಡಿದ್ದಾರೆ. ಮಂಜುನಾಥ್ ಆಪ್ತ​​ ಕಂತೆ-ಕಂತೆ ಹಣ ಎಣಿಸೋ ವಿಡಿಯೋ ಸ್ಪೋಟಗೊಂಡ ಬೆನ್ನಲ್ಲೇ ಜೆಪಿ ನಗರದ ಡಾಲರ್ಸ್​ ಕಾಲೋನಿಯಲ್ಲಿರುವ ಬಿಲ್ಡರ್​ ಮಂಜುನಾಥ್​ ಮನೆ ಮೇಲೆ ಇಡಿ ದಾಳಿ ಮಾಡಿದೆ.

ಸೆಟಲ್ಮೆಂಟ್ ಡೀಡ್ ಹೆಸರಿನಲ್ಲಿ ಸಚಿವ ಮಹದೇವಪ್ಪ ಸಹೋದರ ಪುತ್ರ ನವೀನ್ ಬೋಸ್​​ಗೂ ಸೈಟ್ ನೀಡಿದ್ದಾನೆ. ಲಕ್ಷಾಂತರ ರೂ ಹಣದ ವ್ಯವಹಾರ ನಡೆಸಿರುವುದಕ್ಕೆ ನನ್ನ ಬಳಿ ದಾಖಲೆಗಳಿವೆ,
ಇಡಿ ಅಧಿಕಾರಿಗಳಿಗೆ ಆ ವಿಡಿಯೋ ಕ್ಲಿಪ್ಪಿಂಗ್ ಕೂಡ ನೀಡ್ತೀನಿ. ಎರಡು ಲಕ್ಷಕ್ಕಿಂತ ಹೆಚ್ಚಿನ ನಗದು ರೂಪದ ಹಣ ಬಳಸುವಂತಿಲ್ಲ, ಆದರೆ 30 ಲಕ್ಷ ರೂ ಹಣ ಎಣಿಸುವ ವಿಡಿಯೋ ಇದೆ. ಪ್ರಕರಣವನ್ನ ಸಿಬಿಐಗೆ ವಹಿಸುವಂತೆ ಮನವಿ ಮಾಡ್ತೀನಿ, ಲೋಕಾಯುಕ್ತ ಅಧಿಕಾರಿಗಳ ಬಗ್ಗೆ ನನಗೆ ನಂಬಿಕೆ ಇಲ್ಲ ಎಂದು ಆರ್​ಟಿಐ ಕಾರ್ಯಕರ್ತ ಗಂಗರಾಜು ಹೇಳಿದ್ದಾರೆ.

ಇದನ್ನೂ ಓದಿ : ಮುಡಾ ಕೇಸ್ : ದೂರುದಾರ ಗಂಗರಾಜುಗೆ ಇಡಿ ಸಮನ್ಸ್ ಜಾರಿ – ದಾಖಲೆ ಒದಗಿಸಲು ಸೂಚನೆ..!

Leave a Comment

DG Ad

RELATED LATEST NEWS

Top Headlines

ಜೈ ಹನುಮಾನ್ ಚಿತ್ರದ ಫಸ್ಟ್ ಲುಕ್ ರಿಲೀಸ್ – ಆಂಜನೇಯನಾದ ಡಿವೈನ್ ಸ್ಟಾರ್‌ ರಿಷಬ್‌ ಶೆಟ್ಟಿ..!

ರಾಷ್ಟ್ರ ಪ್ರಶಸ್ತಿ ವಿಜೇತ, ಕನ್ನಡ ಸ್ಟಾರ್ ನಟ ರಿಷಬ್ ಶೆಟ್ಟಿ ಹೊಸ ಅವತಾರ ತಾಳಿದ್ದಾರೆ. ನಿರ್ದೇಶಕ ಪ್ರಶಾಂತ್ ವರ್ಮಾ ಪ್ಯಾನ್ ಇಂಡಿಯಾ ಹನುಮಾನ್ ನಂತರ ಬಹುನಿರೀಕ್ಷಿತ ಸೀಕ್ವೆಲ್

Live Cricket

Add Your Heading Text Here