ಬೆಂಗಳೂರು : ಮುಡಾದಲ್ಲಿ ಅಕ್ರಮ ನಿವೇಶನ ಹಂಚಿಕೆ ಕೇಸ್ನಲ್ಲಿ 14 ಬದಲಿ ನಿವೇಶನಗಳ ದಾಖಲೆ ನಾಪತ್ತೆ ಬಗ್ಗೆ ದೂರು ನೀಡಿದ್ದ ಆರ್ಟಿಐ ಕಾರ್ಯಕರ್ತ ಗಂಗರಾಜುಗೆ ಇಡಿ ಸಮನ್ಸ್ ನೀಡಿದೆ. ದೂರಿನ ಸಂಬಂಧ ಅಗತ್ಯ ದಾಖಲೆ ಒದಗಿಸಲು ಸಿಎಂ ವಿರುದ್ಧ ದೂರು ನೀಡಿದ್ದ ಗಂಗರಾಜುಗೆ ಇಡಿ ಸೂಚನೆ ನೀಡಿದೆ.
ಕೆಲ ಹೊತ್ತಿನಲ್ಲೇ ದೂರುದಾರ ಗಂಗರಾಜು ಇಡಿ ಕಚೇರಿಗೆ ಹೋಗಲಿದ್ದಾರೆ. RTI ಕಾರ್ಯಕರ್ತ ಗಂಗರಾಜು ಸುಮಾರು 1200 ಪುಟಗಳ ದಾಖಲೆ ಸಮೇತ ದೂರು ಸಲ್ಲಿಸಿದ್ದರು. ಇಂದು ದಾಖಲೆ ಸಮೇತ ಗಂಗರಾಜು ಬೆಂಗಳೂರು ED ಕಚೇರಿಗೆ ಹಾಜರಾಗಲಿದ್ದಾರೆ.
ಇನ್ನು ಇತ್ತೀಚೆಗೆ ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಯವರ ವಿಚಾರಣೆ ಮಾಡಲಾಗಿದೆ. ಬೆಳಗ್ಗೆ 10 ಗಂಟೆಗೆ ಲೋಕಾಯುಕ್ತ ಕಚೇರಿಗೆ ಬಂದಿದ್ದ ಪಾರ್ವತಿಯವರು, ಮೂರು ಗಂಟೆಗಳ ಕಾಲ ವಿಚಾರಣೆ ಎದುರಿಸಿ, ಹೇಳಿಕೆ ದಾಖಲಿಸಿ ತೆರಳಿದ್ದರು. ಆ ಮೂಲಕ ಲೋಕಾಯುಕ್ತ ಪೊಲೀಸರು ಗೌಪ್ಯವಾಗಿ ಮಾಹಿತಿ ಸಂಗ್ರಹಿಸಿರೋದು, ಪಾರ್ವತಿಯವರ ವಿಚಾರಣೆ ನಡೆಸಿರೋದು ಮಹತ್ವ ಪಡೆದುಕೊಂಡಿದೆ. ಈವರೆಗೆ A2ಪಾರ್ವತಿ, A3 ಮಲ್ಲಿಕಾರ್ಜುನಸ್ವಾಮಿ, A4 ದೇವರಾಜು ವಿಚಾರಣೆ ನಡೆಸಲಾಗಿದ್ದು, ಪ್ರಕರಣ A1 ಸಿದ್ದರಾಮಯ್ಯ ವಿಚಾರಣೆ ಮಾತ್ರ ಬಾಕಿ ಇದೆ.
ಇದನ್ನೂ ಓದಿ : ಬೆಂಗಳೂರು : ನಡು ರಸ್ತೆಯಲ್ಲಿ ಧಗಧಗನೆ ಹೊತ್ತಿ ಉರಿದ ಕಾರು..!