ಬೆಂಗಳೂರು : ಕೇಸ್ ವೊಂದರ ಆರೋಪಿಯನ್ನ ಬಂಧಿಸಲು ಲಂಚಕ್ಕೆ ಬೇಡಿಕೆ ಇಟ್ಟ ವೈಟ್ ಫಿಲ್ಡ್ ಠಾಣೆ PSI ಗಂಗಾಧರ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಆರೋಪಿಗಳ ಮೇಲೆ 307 ಕೇಸ್ ಹಾಕೋದಾಗಿ ದೂರುದಾರ ಅಂಬರೀಶ್ ಎಂಬುವರ ಬಳಿ PSI ಗಂಗಾಧರ್, 50ಸಾವಿರ ರೂಪಾಯಿ ಹಣ ಡಿಮ್ಯಾಂಡ್ ಮಾಡಿದ್ದರು.
ಆದ್ರೆ ಈ ಮೊದಲೇ ಕೇಸ್ ನಲ್ಲಿ ಆರೋಪಿಗಳಿಗೆ ಕೋರ್ಟ್ ನಿಂದ ಜಾಮೀನು ಸಿಕ್ಕಿತ್ತು. ಈ ವಿಷಯ ಮುಚ್ಚಿಟ್ಟ PSI ಗಂಗಾಧರ್, ಕೇಸ್ ಸಂಬಂಧ ಆರೋಪಿಗಳನ್ನ ಬಂಧಿಸೋದಾಗಿ ಸುಳ್ಳು ಹೇಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ದೂರುದಾರರ ಬಳಿ 25ಸಾವಿರ ಪಡೆಯುವಾಗ PSI ಗಂಗಾಧರ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಸದ್ಯ ಹಣದ ಸಮೇತ ಪಿಎಸ್ ಐ ರನ್ನ ವಶಕ್ಕೆ ಪಡೆದ ಲೋಕಾ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
Post Views: 232