Download Our App

Follow us

Home » ರಾಜಕೀಯ » ಮುಡಾ ಕೇಸ್ : ದೂರುದಾರ ಗಂಗರಾಜುಗೆ ಇಡಿ ಸಮನ್ಸ್ ಜಾರಿ – ದಾಖಲೆ ಒದಗಿಸಲು ಸೂಚನೆ..!

ಮುಡಾ ಕೇಸ್ : ದೂರುದಾರ ಗಂಗರಾಜುಗೆ ಇಡಿ ಸಮನ್ಸ್ ಜಾರಿ – ದಾಖಲೆ ಒದಗಿಸಲು ಸೂಚನೆ..!

ಬೆಂಗಳೂರು : ಮುಡಾದಲ್ಲಿ ಅಕ್ರಮ ನಿವೇಶನ ಹಂಚಿಕೆ ಕೇಸ್​ನಲ್ಲಿ 14 ಬದಲಿ ನಿವೇಶನಗಳ ದಾಖಲೆ ನಾಪತ್ತೆ ಬಗ್ಗೆ ದೂರು ನೀಡಿದ್ದ ಆರ್​​ಟಿಐ ಕಾರ್ಯಕರ್ತ ಗಂಗರಾಜುಗೆ ಇಡಿ ಸಮನ್ಸ್​ ನೀಡಿದೆ. ದೂರಿನ ಸಂಬಂಧ ಅಗತ್ಯ ದಾಖಲೆ ಒದಗಿಸಲು ಸಿಎಂ ವಿರುದ್ಧ ದೂರು ನೀಡಿದ್ದ ಗಂಗರಾಜುಗೆ ಇಡಿ ಸೂಚನೆ ನೀಡಿದೆ.

ಕೆಲ ಹೊತ್ತಿನಲ್ಲೇ ದೂರುದಾರ ಗಂಗರಾಜು ಇಡಿ ಕಚೇರಿಗೆ ಹೋಗಲಿದ್ದಾರೆ. RTI ಕಾರ್ಯಕರ್ತ ಗಂಗರಾಜು ಸುಮಾರು 1200 ಪುಟಗಳ ದಾಖಲೆ ಸಮೇತ ದೂರು ಸಲ್ಲಿಸಿದ್ದರು. ಇಂದು ದಾಖಲೆ ಸಮೇತ ಗಂಗರಾಜು ಬೆಂಗಳೂರು ED ಕಚೇರಿಗೆ ಹಾಜರಾಗಲಿದ್ದಾರೆ.

ಇನ್ನು ಇತ್ತೀಚೆಗೆ ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಯವರ ವಿಚಾರಣೆ ಮಾಡಲಾಗಿದೆ. ಬೆಳಗ್ಗೆ 10 ಗಂಟೆಗೆ ಲೋಕಾಯುಕ್ತ ಕಚೇರಿಗೆ ಬಂದಿದ್ದ ಪಾರ್ವತಿಯವರು, ಮೂರು ಗಂಟೆಗಳ ಕಾಲ ವಿಚಾರಣೆ ಎದುರಿಸಿ, ಹೇಳಿಕೆ ದಾಖಲಿಸಿ ತೆರಳಿದ್ದರು. ಆ ಮೂಲಕ ಲೋಕಾಯುಕ್ತ ಪೊಲೀಸರು ಗೌಪ್ಯವಾಗಿ ಮಾಹಿತಿ ಸಂಗ್ರಹಿಸಿರೋದು, ಪಾರ್ವತಿಯವರ ವಿಚಾರಣೆ ನಡೆಸಿರೋದು ಮಹತ್ವ ಪಡೆದುಕೊಂಡಿದೆ. ಈವರೆಗೆ A2ಪಾರ್ವತಿ, A3 ಮಲ್ಲಿಕಾರ್ಜುನಸ್ವಾಮಿ, A4 ದೇವರಾಜು ವಿಚಾರಣೆ ನಡೆಸಲಾಗಿದ್ದು, ಪ್ರಕರಣ A1 ಸಿದ್ದರಾಮಯ್ಯ ವಿಚಾರಣೆ ಮಾತ್ರ ಬಾಕಿ ಇದೆ.

ಇದನ್ನೂ ಓದಿ : ಬೆಂಗಳೂರು : ನಡು ರಸ್ತೆಯಲ್ಲಿ ಧಗಧಗನೆ ಹೊತ್ತಿ ಉರಿದ ಕಾರು..!

Leave a Comment

DG Ad

RELATED LATEST NEWS

Top Headlines

ಜೈ ಹನುಮಾನ್ ಚಿತ್ರದ ಫಸ್ಟ್ ಲುಕ್ ರಿಲೀಸ್ – ಆಂಜನೇಯನಾದ ಡಿವೈನ್ ಸ್ಟಾರ್‌ ರಿಷಬ್‌ ಶೆಟ್ಟಿ..!

ರಾಷ್ಟ್ರ ಪ್ರಶಸ್ತಿ ವಿಜೇತ, ಕನ್ನಡ ಸ್ಟಾರ್ ನಟ ರಿಷಬ್ ಶೆಟ್ಟಿ ಹೊಸ ಅವತಾರ ತಾಳಿದ್ದಾರೆ. ನಿರ್ದೇಶಕ ಪ್ರಶಾಂತ್ ವರ್ಮಾ ಪ್ಯಾನ್ ಇಂಡಿಯಾ ಹನುಮಾನ್ ನಂತರ ಬಹುನಿರೀಕ್ಷಿತ ಸೀಕ್ವೆಲ್

Live Cricket

Add Your Heading Text Here