ಮದಗಜ ಚಿತ್ರ ತೆರೆಗೆ ಬಂದ ಮೂರು ವರ್ಷಗಳ ಬಳಿಕ ಶ್ರೀಮುರಳಿ ನಟಿಸಿರುವ ಹೊಸ ಸಿನಿಮಾ ‘ಬಘೀರ’ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಇದೇ ಅಕ್ಟೋಬರ್ 31ರಂದು ‘ಬಘೀರ’ ಅದ್ಧೂರಿಯಾಗಿ ಚಿತ್ರಮಂದಿರಗಳಿಗೆ ಎಂಟ್ರಿ ಕೊಡುತ್ತಿದೆ.
‘ಬಘೀರ’ ಟೀಸರ್‌ನಲ್ಲಿ ವಿಷ್ಯುವಲ್ಸ್ ಹುಬ್ಬೇರಿಸುವಂತಿದೆ. ಹಾಲಿವುಡ್ ಸಿನಿಮಾಗಳ ಶೈಲಿಯ ಆಕ್ಷನ್ ಸನ್ನಿವೇಶಗಳು ಚಿತ್ರದಲ್ಲಿದೆ. ರೋರಿಂಗ್ ಸ್ಟಾರ್ ಜಬರ್ದಸ್ತ್ ಆಕ್ಷನ್ ಮೂಲಕ ಪ್ರೇಕ್ಷಕರನ್ನು ರಂಜಿಸೋಕೆ ಬರ್ತಿರೋದು ಗೊತ್ತಾಗುತ್ತಿದೆ. ಮೈ ಜುಮನ್ ಎನಿಸುವ ಸ್ಟಂಟ್ಸ್ ಮಾಡಿ ಗಮನ ಸೆಳೆದಿದ್ದಾರೆ.
ಇದೀಗ ಈ ಬಗ್ಗೆ ಬಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶ್ರೀಮುರಳಿ ಅವರು, ಇಂಡಿಯ್ ಸಿನಿಮಾದಲ್ಲಿ ಕೆಲಸ ಮಾಡ್ತಿರುವವರು,ನಾವೆಲ್ಲರೂ ಇಂಡಿಯಾ ಸಿನಿಮಾವನ್ನು ನಾವು ರೆಪ್ರೆಸೆಂಟ್ ಮಾಡುತ್ತಿರುವವರು. ನೀವೆಲ್ಲರೂ ಇಷ್ಟರ ಮಟ್ಟಿಗೆ ಬಘೀರ ಸಿನಿಮಾದ ಆ ಒಂದು ಟ್ರೈನ್ ದೃಶ್ಯವನ್ನು ಕೊಂಡಾಡುತ್ತಿದ್ದಿರಿ ಆದ್ರೆ, ಅದು ಒಂದೆರಡು, ಮೂರು ದಿನದಲ್ಲಿ ಆದ ವಿಚಾರ ಅಲ್ಲ ಎಂದಿದ್ದಾರೆ.
ನಮ್ಮ ಡೈರೆಕ್ಟರ್ ಒಂದು ಸಿಕ್ವೇನ್ಸ್ ಅನ್ನು ಮಾಡಲು ಒಂದುವರೆ ವರ್ಷ ಪ್ಲಾನ್ ಮಾಡಿದ್ದಾರೆ. ಪ್ಲಾನ್ ಮಾಡಿದ ನಂತರ ಅದಕ್ಕೆ ತಕ್ಕಂತೆ ಕೆಲಸ ಮಾಡಿಸಲು ಒಂದು ಫೈಟ್ ಮಾಸ್ಟರ್, ಸೆಟ್, ಪ್ರೊಡಕ್ಷನ್ ಅವರನ್ನು ಬಜೆಟ್ಗೆ ಒಪ್ಪಿಸ್ಬೇಕು. ಈ ಎಲ್ಲ ಕೆಲಸವನ್ನು ಅವರು ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ. ಅಷ್ಟು ಮಟ್ಟಕ್ಕೆ ಆ ಸೀನ್ ಕಾಣಿಸಿದೆ ಅಂದ್ರೆ, ಅದಕ್ಕೆ ನಮ್ಮ ನಿರ್ದೇಶಕರು ತುಂಬಾ ಚೆನ್ನಾಗಿ ಕೆಲಸ ಮಾಡಿ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಇದೊಂದು ತುಂಬಾ ಜವಾಬ್ದಾರಿಯಿಂದ ಮಾಡಿದ ಕೆಲಸ. ಯಾವುದು ಸುಲಭದಿಂದ ಅದ ಕೆಲಸವಲ್ಲ. ನಾನು ಕೆಲವೊಂದನ್ನ ವಿಚಾರವನ್ನು ಅ.31 ಅದ್ಮೇಲೆ ಮಾತಾಡೋನಾ ಅದ್ಕೊಂಡೆ. ಆದ್ರೆ ಈ ವಿಷಯವನ್ನು ಇಲ್ಲಿ ಹೀಗೆ ಹೇಳುವುದು ಉತ್ತಮ ಅನ್ನಿಸಿತು. ಯಾಕಂದ್ರೆ ಆ ಎಫರ್ಟ್ ಆಗಿದೆ ಎಂದಿದ್ದಾರೆ. ನನ್ನ ಕೈಯಲ್ಲಿ ಈ ತರ ಕೆಲಸ ಮಾಡಿಸಿದ್ದಕ್ಕೆ ನನಗೆ ತುಂಬಾ ಖುಷಿಯಿದೆ. ನನ್ನನ್ನು ಸೂಪರ್ ಹೀರೋ ತರ ಮೈಂಡ್ನಲ್ಲಿ ಇಟ್ಟುಕೊಂಡು ಈ ಪಾತ್ರವನ್ನು ನ್ಯಾಚುರಲ್ ಆಗಿ ಹೇಗೆ ಮಾಡ್ಬಹುದು ಅನ್ನವ ಅವರ ಕಲ್ಪನೆಯೇ ನನಗೆ ಬಹಳ ಇಷ್ಟವಾಯಿತು ಎಂದಿದ್ದಾರೆ.
ಇನ್ನು ಡಾ. ಸೂರಿ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಬಘೀರ ಸಿನಿಮಾಕ್ಕೆ, ನವೀನ್ ಕುಮಾರ್ ಛಾಯಾಗ್ರಹಣವಿದೆ. ಪ್ರಶಾಂತ್ ನೀಲ್ ಶಕ್ತಿಶಾಲಿ ಕಥೆ ಬರೆದಿದ್ದಾರೆ. ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಇದೇ ಅಕ್ಟೋಬರ್ 31ರಂದು ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಬಘೀರ ಚಿತ್ರದಲ್ಲಿ ಪೊಲೀಸ್ ಅವತಾರದಲ್ಲಿ ಶ್ರೀಮುರಳಿ ನಟಿಸಿದ್ದಾರೆ. ಅವರಿಗೆ ಜೋಡಿಯಾಗಿ ರುಕ್ಮಿಣಿ ವಸಂತ್ ನಟಿಸಿದರೆ, ಇನ್ನುಳಿದಂತೆ ಪ್ರಕಾಶ್ ರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್, ಗರುಡ ರಾಮ್ ಸೇರಿ ಇನ್ನೂ ಹತ್ತಾರು ಕಲಾವಿದರು ನಟಿಸಿದ್ದಾರೆ.
ಇದನ್ನೂ ಓದಿ : ರಾಕೇಶ್ ದಳವಾಯಿ ನಟನೆಯ ‘ಧೀರ ಭಗತ್ ರಾಯ್’ ಸಿನಿಮಾದ ಟ್ರೇಲರ್ ರಿಲೀಸ್ – ಚಿತ್ರಕ್ಕೆ ದುನಿಯಾ ವಿಜಯ್ ಸಾಥ್..!