ವಿಜಯಪುರ : ವಕ್ಫ್ ವಿವಾದದ ವಿಚಾರವಾಗಿ ಕರಾಳ ದೀಪಾವಳಿ ಆಚರಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ರೈತರಿಗೆ ನೀಡಿದ್ದ ನೋಟಿಸ್ ಅನ್ನು ಜಿಲ್ಲಾಡಳಿತ ಹಿಂಪಡೆದಿದೆ.
ವಕ್ಫ್ ದಂಗಲ್ ವಿಚಾರವಾಗಿ ವಿಜಯಪುರ ರೈತರು ನೋಟಿಸ್ ಹಿಂಪಡೆಯುವಂತೆ ಕರಾಳ ದೀಪಾವಳಿ ಆಚರಿಸುತ್ತಿದ್ದರು. ರೈತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಡಿಸಿ ಟಿ. ಭೂಬಾಲನ್ ರೈತರ ಸಮಸ್ಯೆ ಆಲಿಸಿ ಪಹಣಿಯಲ್ಲಿನ ವಕ್ಫ್ ಹೆಸರು ತೆಗೆಯೋದಾಗಿ ಭರವಸೆ ನೀಡಿದ್ದು, ಈಗಾಗಲೇ ಇಂಡಿ ತಾಲೂಕಿನ 41 ರೈತರ ಜಮೀನು ಇಂದೀಕರಣ ರದ್ದು ಮಾಡಿದ್ದೇವೆ ಎಂದು ಹೇಳಿದ್ದಾರೆ.
ನೋಟಿಸ್ ಹಿಂಪಡೆದ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿ, ರೈತರಿಗೆ ನೀಡಿದ ನೋಟಿಸ್ ವಾಪಸ್ ಪಡೆದಿದ್ದು, 44 ರೈತರ ಇಂದೀಕರಣ ರದ್ದು ಮಾಡಿದ್ದೇವೆ. ಇನ್ನು ಮುಂದೆ ನೋಟಿಸ್ ನೀಡಲ್ಲ. ರೈತರಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ರೈತರ ದಾಖಲಾತಿ ಸರಿ ಪಡೆಸಲು ಟಾಸ್ಕ್‌ಫೋರ್ಸ್ ಇದೆ. ಈಗಾಗಲೇ ಟಾಸ್ಕ್‌ಫೋರ್ಸ್ ಕೆಲಸ ಶುರು ಮಾಡಿದೆ. ಉಳುಮೆ ಮಾಡುವ ರೈತರ ಫೈಲ್‌ಗಳನ್ನು ನಾವೇ ರೆಡಿ ಮಾಡಿ, ವಕ್ಫ್ ಬೋರ್ಡ್‌ನಿಂದ ಕೈ ಬಿಡಲು ನಾವೇ ಅಹವಾಲು ಇಡುತ್ತೇವೆ. ರೈತರು ಗಾಭರಿಯಾಗಬೇಡಿ. ಆತಂಕ ಪಡದೆ ದೀಪಾವಳಿ ಆಚರಿಸಿ ಎಂದು ತಿಳಿಸಿದ್ದಾರೆ. ನೋಟಿಸ್ ವಾಪಸ್ ಪಡೆಯುತ್ತಲೇ ರೈತರು ಹೋರಾಟ ಹಿಂಪಡೆದಿದ್ದಾರೆ.
ಇದನ್ನೂ ಓದಿ : ಜೈ ಹನುಮಾನ್ ಚಿತ್ರದ ಫಸ್ಟ್ ಲುಕ್ ರಿಲೀಸ್ – ಆಂಜನೇಯನಾದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ..!