ಬಾಗಲಕೋಟೆ : ಷೇರು ಮಾರುಕಟ್ಟೆ ಹೆಸರಲ್ಲಿ ಕೃಷಿ ಅಧಿಕಾರಿಗಳಿಬ್ಬರಿಗೆ ಆನ್ಲೈನ್ ಮೂಲಕ ಬರೋಬ್ಬರಿ 46 ಲಕ್ಷ ರೂಪಾಯಿಗಳಷ್ಟು ವಂಚನೆ ಮಾಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಜಮಖಂಡಿ ಕೃಷಿ ಅಧಿಕಾರಿ ಶ್ರೀಶೈಲ್ ಅವರ ಖಾತೆಯಿಂದ 20 ಲಕ್ಷ ಹಾಗೂ ಮುಧೋಳದ ಕೃಷಿ ಅಧಿಕಾರಿ ಪ್ರಕಾಶ್ ಅವರ ಖಾತೆಯಿಂದ 26 ಲಕ್ಷ ರೂಪಾಯಿಗಳನ್ನ ಸೈಬರ್ ಕಳ್ಳರು ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿದ್ದಾರೆ.
ಇಂಟರನ್ಯಾಶನಲ್ ಇಕ್ವಿಟಿ ಫಂಡ್ ಹೆಸರಿನಲ್ಲಿ ವಂಚನೆ ನಡೆದಿದ್ದು, ಹೂಡಿಕೆ ಮಾಡಿದ್ರೆ ಭರ್ಜರಿ ಲಾಭ ಬರುತ್ತೆ ಎಂದು ನಂಬಿಸಿ ಹಣ ಡಬಲ್ ಮಾಡುವಆಮೀಷವೊಡ್ಡಿ ವಂಚನೆ ಮಾಡಿದ್ದಾರೆ. ವಂಚಕರ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ.
ತಮಿಳುನಾಡು, ಹೈದರಾಬಾದ್, ಉತ್ತರ ಭಾರತ ಮೂಲದ ವಿವಿಧ ರಾಜ್ಯಗಳಿಂದ ದೂರವಾಣಿ ಕರೆಗಳು ಬಂದಿವೆ. ಮೋಸ ಹೋಗಿರುವ ಅಧಿಕಾರಿಗಳು ಬಾಗಲಕೋಟೆಯ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ : ಅಭಿಷೇಕ್ ಮುಂದೆಯೇ ನಡೆದಿತ್ತಾ ಹೃತಿಕ್-ಐಶ್ವರ್ಯಾ ಕಿಸ್ಸಿಂಗ್ ಸೀನ್?