ಬಾಲಿವುಡ್ ನಟಿ ಐಶ್ವರ್ಯಾ ರೈ ತನ್ನ ಬ್ಯೂಟಿ ಹಾಗೂ ನಟನೆಯಿಂದ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಸಿಂಪಲ್ ಆ್ಯಂಡ್ ಸೂಪರ್ ಹೀರೋಯಿನ್ ಎಂದೇ ಗುರುತಿಸಿಕೊಂಡ ಐಶ್ವರ್ಯಾ ಒಂದೇ ಒಂದು ಸಿನಿಮಾ ಸೀನ್ ನಿಂದ ಸಂಕಷ್ಟಕ್ಕೆ ಸಿಲುಕಿದ್ದರು.
ಐಶ್ವರ್ಯಾ ರೈ ಸೂಪರ್ ಹಿಟ್ ಚಿತ್ರ ‘ಧೂಮ್ 2’ ನಲ್ಲಿ ಕಾಣಿಸಿಕೊಂಡಿದ್ರು. ಈ ಚಿತ್ರದಲ್ಲಿ ಅವರು ಹೃತಿಕ್ ರೋಷನ್ ಅವರೊಂದಿಗೆ ಕಿಸ್ಸಿಂಗ್ ಸೀನ್ ಮಾಡಿದ್ದಾರೆ. ಆ ಒಂದು ದೃಶ್ಯ ಐಶ್ ಪಾಲಿಗೆ ನಾನಾ ಸಂಕಷ್ಟ ತಂದೊಡ್ಡಿತ್ತು. ಅದರಿಂದ ಕೆಲ ಸಮಸ್ಯೆಗಳನ್ನು ಕೂಡ ಎದುರಿಸಿದ್ದಾರೆ. ಐಶ್ವರ್ಯಾ ರೈ-ಹೃತಿಕ್ ರೋಷನ್ ಕಿಸ್ಸಿಂಗ್ ಸೀನ್ ನೋಡಿ ಕೆಲ ಫ್ಯಾನ್ಸ್ ಕೆಂಡಾಮಂಡಲರಾಗಿದ್ರು. ಈ ಬಗ್ಗೆ ಸ್ವತಃ ಐಶ್ವರ್ಯಾ ರೈ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಈ ವೇಳೆ ಐಶ್ವರ್ಯಾ ಹೇಳಿದ್ದು, ನಾನು ಒಂದೇ ಒಂದು ಸೀನ್ ಮಾಡಿದ್ದು ಹಾಟ್ ಟಾಪಿಕ್ ಆಯಿತು. ಈ ಒಂದು ದೃಶ್ಯದಿಂದಾಗಿ ನನಗೆ ಲೀಗಲ್ ನೋಟಿಸ್ ಬರತೊಡಗಿತು. ಜನರು ಈ ಬಗ್ಗೆ ಚರ್ಚಿಸಿದ್ರು. ನೀವು ದಶಕಗಳಿಂದ ಮಿಂಚಿದವರು, ನೀವು ಅನೇಕ ಮಹಿಳೆಯರಿಗೆ ಮಾದರಿ ಆಗಿದ್ದೀರಿ, ನೀವು ನಿಮ್ಮ ಜೀವನವನ್ನು ಆದರ್ಶ ರೀತಿಯಲ್ಲಿ ಬದುಕಿದ್ದೀರಿ, ನೀವು ತೆರೆಯ ಮೇಲೆ ಚುಂಬಿಸುವುದನ್ನು ನೋಡಿ ಬೇಸರವಾಗಿದೆ. ಯಾಕೆ ಈ ಸೀನ್ ಮಾಡಿದ್ರಿ ಎಂದು ಜನ ಐಶ್ ಅವರನ್ನು ಪ್ರಶ್ನೆ ಮಾಡಿದ್ರಂತೆ.
ಐಶ್ವರ್ಯಾ ರೈ ಮದುವೆಗೆ 6 ತಿಂಗಳಿರುವಾಗ ಈ ದೃಶ್ಯವನ್ನು ಚಿತ್ರೀಕರಿಸಿದ್ದರು. ಈ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಕೂಡ ಅವರೊಂದಿಗೆ ಇದ್ದರು. ಈ ದೃಶ್ಯದಿಂದಾಗಿ ಬಚ್ಚನ್ ಕುಟುಂಬ ಕೂಡ ಐಶ್ವರ್ಯಾ ವಿರುದ್ಧ ಅಸಮಾಧಾನಗೊಂಡಿದ್ದರಂತೆ.
ಇದನ್ನೂ ಓದಿ : ಮುಂಬೈನ ರೈಲು ನಿಲ್ದಾಣದಲ್ಲಿ ಕಾಲ್ತುಳಿತ – 9 ಮಂದಿಗೆ ಗಾಯ..!