Download Our App

Follow us

Home » ರಾಷ್ಟ್ರೀಯ » ಅಯೋಧ್ಯೆಯಲ್ಲಿ ದೀಪಾವಳಿ ವೈಭವ – ಏಕಕಾಲದಲ್ಲಿ ಬೆಳಗಿದ 25 ಲಕ್ಷಕ್ಕೂ ಹೆಚ್ಚು ಹಣತೆ.. 2 ಗಿನ್ನಿಸ್ ದಾಖಲೆ..!

ಅಯೋಧ್ಯೆಯಲ್ಲಿ ದೀಪಾವಳಿ ವೈಭವ – ಏಕಕಾಲದಲ್ಲಿ ಬೆಳಗಿದ 25 ಲಕ್ಷಕ್ಕೂ ಹೆಚ್ಚು ಹಣತೆ.. 2 ಗಿನ್ನಿಸ್ ದಾಖಲೆ..!

ಅಯೋಧ್ಯೆ : ಉತ್ತರ ಪ್ರದೇಶದ ಅಯೋಧ್ಯಾ ನಗರಿ ನಿನ್ನೆ ಸಂಜೆ ದೀಪಾವಳಿ ಬೆಳಕಿನಲ್ಲಿ ರಾರಾಜಿಸಿತು. ಕಣ್ಣು ಹಾಯಿಸಿದಲ್ಲೆಲ್ಲ ಹಬ್ಬದ ಸಡಗರ, ಸಂಭ್ರಮವೇ ಕಂಡುಬಂತು. ಸರಯೂ ನದಿ ತೀರದಲ್ಲಿ 8ನೇ ವರ್ಷದ ದೀಪಾವಳಿ ದೀಪೋತ್ಸವ ಅತ್ಯಂತ ಅದ್ಧೂರಿಯಾಗಿ ನಡೆಯಿತು.

ಇದೇ ವೇಳೆ ಎರಡು ಗಿನ್ನೆಸ್ ವಿಶ್ವದಾಖಲೆಗಳು ನಿರ್ಮಾಣವಾದವು. ಒಂದೆಡೆ ಅತಿ ಹೆಚ್ಚು ಜನರು ಆರತಿ ಬೆಳಗಿದ ದಾಖಲೆಯಾದರೆ ಮತ್ತೊಂದೆಡೆ, ವಿಶ್ವದಲ್ಲೇ ಅತಿ ಹೆಚ್ಚು ಮಣ್ಣಿನ ಹಣತೆಗಳಲ್ಲಿ ಎಣ್ಣೆಯ ದೀಪಗಳನ್ನು ಹಚ್ಚಿದ ದಾಖಲೆ ರಚನೆಯಾಯಿತು.

25 ಲಕ್ಷಕ್ಕೂ ಹೆಚ್ಚು ಮಣ್ಣಿನ ಹಣತೆಗಳಲ್ಲಿ ಎಣ್ಣೆಯ ದೀಪಗಳನ್ನು ಏಕಕಾಲದಲ್ಲಿ ಬೆಳಗಿಸಲಾಯಿತು. ಇದೇ ವೇಳೆ, 1,121 ಮಂದಿ ವೇದಾಚಾರ್ಯರು ಸರಯೂ ನದಿಗೆ ಆರತಿ ಎತ್ತಿದರು. ಈ ದೃಶ್ಯ ಕಣ್ಣಿಗೆ ಹಬ್ಬದಂತೆ ರಮಣೀಯವಾಗಿ ಗೋಚರಿಸಿತು.

ದೀಪೋತ್ಸವದ ಹಿನ್ನೆಲೆ ರಾಮಾಯಣದ ಘಟನೆಗಳನ್ನು ಚಿತ್ರಿಸುವ ಲೇಸರ್ ಶೋ ಡ್ರೋನ್ ಪ್ರದರ್ಶನ ಕೂಡ ನಡೆಯಿತು. ಡ್ರೋನ್​ನಲ್ಲಿ ಮೂಡಿದ ರಾಮ, ಸೀತಾ, ಲಕ್ಷ್ಮಣ, ಹನುಮಂತನ ಆಕೃತಿ ಮನಸೂರೆಗೊಳಿಸ್ತು. ಇನ್ನು ಆಗಸದಲ್ಲಿ ಪಟಾಕಿಗಳು ಚಿತ್ತಾರ ಬಿಡಿಸಿದವು. ಒಟ್ಟಾರೆ ರಾಮಜನ್ಮ ಭೂಮಿಯಲ್ಲಿ 8ನೇ ದೀಪೋತ್ಸವ. 500 ವರ್ಷಗಳ ಬಳಿಕ ಬಾಲರಾಮನ ಮುಂದೆ ನಡೆದ ಮೊದಲ ದೀಪೋತ್ಸವ ಸ್ವರ್ಗವನ್ನೇ ಧರೆಗಿಳಿದಂತೆ ಕಂಗೊಳಿಸಿತು.

ಇದನ್ನೂ ಓದಿ : ಮಗನ ಬರ್ತಡೇ ದಿನವೇ ಮನೆಗೆ ಅಪ್ಪನ ಎಂಟ್ರಿ.. ಇಂದು ದರ್ಶನ್​​ ಪುತ್ರ ವಿನೀಶ್​ಗೆ​ ಹುಟ್ಟುಹಬ್ಬದ ಸಂಭ್ರಮ..!

Leave a Comment

DG Ad

RELATED LATEST NEWS

Top Headlines

ಮೋಕ್ಷಿತಾಗೆ ಹತ್ತಿರವಾಗೋಕೆ ಹೊರಟ್ರಾ ಗೌತಮಿ – ವರ್ಕೌಟ್ ಆಗುತ್ತಾ ಆಟದ ಲೆಕ್ಕ?

ಬಿಗ್​ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾದಾಗ ಗೌತಮಿ, ಉಗ್ರಂ ಮಂಜು ಮತ್ತು ಮೋಕ್ಷಿತಾ ತುಂಬಾ ಆತ್ಮೀಯ ಸ್ನೇಹಿತರಾಗಿದ್ದರು. ನಂತರ ಟಾಸ್ಕ್​ ವಿಚಾರಕ್ಕೆ ಈ ಮೂವರ ಮಧ್ಯೆ ಭಿನ್ನಾಭಿಪ್ರಾಯ

Live Cricket

Add Your Heading Text Here