ಬೆಂಗಳೂರಿನ ಚಿತ್ರಕೂಟ ಶಾಲೆಯಲ್ಲಿ ಅಗ್ನಿ ಅವಘಡ – ತಪ್ಪಿದ ಭಾರೀ ಅನಾಹುತ!

ಬೆಂಗಳೂರು : ಕೆಂಗೇರಿ ಸಮೀಪದ ನಾಗದೇವನಹಳ್ಳಿಯಲ್ಲಿರುವ ಚಿತ್ರಕೂಟ ಶಾಲೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಶಾಲೆಯ ಮೇಲಿನ ಮಹಡಿಯಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಧಗಧಗನೆ ಹೊತ್ತಿ ಉರಿದಿದೆ.

ಬೆಂಕಿ ಕಾಣಿಸಿಕೊಳ್ತಿದ್ದಂತೆ ಶಿಕ್ಷಕರು ಮತ್ತು ಸಿಬ್ಬಂದಿ ಸೇರಿ ಮಕ್ಕಳನ್ನ ಬೇರೆ ಸ್ಥಳಕ್ಕೆ ಶಿಫ್ಟ್ ಮಾಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. 

ತಕ್ಷಣ ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು, ಸದ್ಯ ಬೆಂಕಿಯನ್ನ ಅಗ್ನಿಶಾಮಕ ಸಿಬ್ಬಂದಿ ಹತೋಟಿಗೆ ತಂದಿದ್ದಾರೆ. ಘಟನಾ ಸ್ಥಳಕ್ಕೆ ಜ್ಞಾನ ಭಾರತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ಸಿಎನ್‌ಜಿ ಬೆಲೆ ಮತ್ತೆ ಏರಿಕೆ – ಪ್ರತಿ ಕೆಜಿಗೆ 2.ರೂ ಹೆಚ್ಚಳ!

Btv Kannada
Author: Btv Kannada

Leave a Comment

Read More