ಬೆಂಗಳೂರು : ಐಪಿಎಲ್ 2026 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭರ್ಜರಿಯಾಗಿ ಫೈನಲ್ ಪ್ರವೇಶಿಸಿದ್ದು, ನಾಳೆ ಫೈನಲ್ ಪಂದ್ಯಾವಳಿ ನಡೆಯಲಿದೆ.
ನಾಳೆ ನಡೆಯಲಿರುವ ಹೈವೋಲ್ಟೇಜ್ ಫೈನಲ್ ಪಂದ್ಯದ ನಂತರ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಬೆಂಗಳೂರು ನಗರ ಪೊಲೀಸರು ಸಾರ್ವಜನಿಕರಿಗೆ ಹಾಗೂ ಆರ್‌ಸಿಬಿ ಅಭಿಮಾನಿಗಳಿಗೆ ಅತ್ಯಂತ ಕಠಿಣ ಸುರಕ್ಷತಾ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ.
ಪಂದ್ಯದ ಫಲಿತಾಂಶದ ಬಳಿಕ ಸಾರ್ವಜನಿಕ ಸ್ಥಳಗಳಲ್ಲಿ ಅತಿರೇಕದ ಸಂಭ್ರಮಾಚರಣೆ ಮಾಡುವುದು, ರಸ್ತೆ ತಡೆದು ಬೈಕ್ ರ‍್ಯಾಲಿ ಅಥವಾ ಸ್ಟಂಟ್‌ಗಳನ್ನು ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದು, ನಿಯಮ ಮೀರಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.
ಮಾರ್ಗಸೂಚಿಯಲ್ಲೇನಿದೆ?
- ಸಾರ್ವಜನಿಕ ಸ್ಥಳಗಳಲ್ಲಿ ಸೆಲೆಬ್ರೇಷನ್ ಮಾಡುವಂತಿಲ್ಲ.
- ರಸ್ತೆಗಳ ಬಳಿ ಎಲ್ಇಡಿ ಅಳವಡಿಕೆಗೆ ಪೊಲೀಸರ ಅನುಮತಿ ಕಡ್ಡಾಯ.
- ಪಟಾಕಿ ಸಿಡಿಸಬಾರದು, ಅಪಾಯಕಾರಿ ವಸ್ತುಗಳ ಬಳಕೆ ಮಾಡುವಂತಿಲ್ಲ.
- ಹೆಚ್ಚು ಜನ ಸೇರಿದಾಗ ದುರ್ವರ್ತನೆ ಮಾಡುವಂತಿಲ್ಲ.
- ಬೈಕ್ ರ‍್ಯಾಲಿ, ಸ್ಟಂಟ್‌ಗಳು, ಹಾರ್ನ್ ಮಾಡುವಂತಿಲ್ಲ, ರಸ್ತೆಗಳನ್ನ ಬ್ಲಾಕ್ ಮಾಡುವಂತಿಲ್ಲ.
- ಮದ್ಯಪಾನ ಮಾಡಿ ಕೂಗಾಡೋದು, ಜಗಳ ಮಾಡೋದು ಮಾಡುವಂತಿಲ್ಲ.
- ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಸುದ್ದಿಗಳನ್ನ, ಪ್ರಚೋದನಾಕಾರಿ ಪೋಸ್ಟ್ ಮಾಡುವಂತಿಲ್ಲ.
- ಕಪ್ ಗೆದ್ದ ಖುಷಿಯಲ್ಲಿ ಬೇರೆ ಟೀಂನ ಅಭಿಮಾನಿಗಳಿಗೆ ರೇಗಿಸುವಂತಿಲ್ಲ.
ಇದನ್ನೂ ಓದಿ : ಬೌಲೆವಾರ್ಡ್ – A2B ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ – ಸಾರ್ವಜನಿಕರಿಗೆ ಎಚ್ಚರಿಕೆ!
Author: Btv Kannada
Post Views: 375








