ಮೂರು ದಿನಗಳ ಬಳಿಕ ಮೌನ ಮುರಿದ ಡಿಕೆ ಶಿವಕುಮಾರ್‌ – ಪ್ರಮಾಣವಚನದ ಬಗ್ಗೆ ಹೇಳಿದ್ದೇನು?

ನವದೆಹಲಿ : ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಡಿಕೆ ಶಿವಕುಮಾರ್ ಸಹ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಹೊಸ ಸಚಿವ ಸಂಪುಟದ ಬಗ್ಗೆ ಚರ್ಚೆ ನಡೆಸಿದ್ದಾರೆ.

ಕಳೆದ ಮೂರು ದಿನಗಳಿಂದಲೂ ಮೌನವಾಗಿದ್ದ ಡಿಕೆ ಶಿವಕುಮಾರ್‌ ಮೊದಲ ಬಾರಿ ಪ್ರತಿಕ್ರಿಯಿಸಿ, ನಾಳೆ ಸಂಜೆ ಬೆಂಗಳೂರಿನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಎಲ್ಲ ಶಾಸಕರಿಗೂ ಬೆಂಗಳೂರಿನಲ್ಲೇ ಇರಲು ಸೂಚನೆ ನೀಡಲಾಗಿದೆ. ಹೈಕಮಾಂಡ್ ನಾಯಕರ ಸೂಚನೆಯ ಮೇರೆಗೆ ಈ ಸಭೆಯ ಸಮಯವನ್ನು ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಮೊದಲಿಗೆ ಶಾಸಕಾಂಗ ಪಕ್ಷದ ನಾಯಕರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪೂರ್ಣಗೊಳ್ಳಬೇಕು, ಬಳಿಕ ಪ್ರಮಾಣ ವಚನಕ್ಕೆ ದಿನ ನಿಗದಿಯಾಗಲಿದೆ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : ಹೊಂಬಾಳೆ ಫಿಲ್ಮ್ಸ್‌ನಿಂದ ಮತ್ತೊಂದು ನೂತನ ಪ್ರಯೋಗ – ಯುವ ಪೀಳಿಗೆಯನ್ನು ಸೆಳೆಯಲು ಸಜ್ಜಾದ ‘YETO KA NAAY’ ಹಿಪ್-ಹಾಪ್ ಮ್ಯೂಸಿಕಲ್ ಸಿನಿಮಾ!

Btv Kannada
Author: Btv Kannada

Leave a Comment

Read More

Read More