Download Our App

Follow us

Home » ಸಿನಿಮಾ » ‘ಮಾರ್ಟಿನ್​’ ಸಿನಿಮಾ ಹೀರೋ ನಾನಲ್ಲ – ಧ್ರುವ ಸರ್ಜಾ ಹಿಂಗ್ಯಾಕಂದ್ರು?

‘ಮಾರ್ಟಿನ್​’ ಸಿನಿಮಾ ಹೀರೋ ನಾನಲ್ಲ – ಧ್ರುವ ಸರ್ಜಾ ಹಿಂಗ್ಯಾಕಂದ್ರು?

ಎ.ಪಿ ಅರ್ಜುನ್‌ ನಿರ್ದೇಶನದ ಹಾಗೂ ‘ಆ್ಯಕ್ಷನ್‌ ಪ್ರಿನ್ಸ್’ ಧ್ರುವ ಸರ್ಜಾ ನಟನೆಯ ಪ್ಯಾನ್‌ ಇಂಡಿಯಾ ಚಿತ್ರ ‘ಮಾರ್ಟಿನ್’ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಬರೋಬ್ಬರಿ 21 ಭಾಷೆಗಳಲ್ಲಿ ರಿಲೀಸ್​​ ಆಗುತ್ತಿರುವ ​​’ಮಾರ್ಟಿನ್’ ಬುಕ್ಕಿಂಗ್​​ನಲ್ಲೂ ಹೊಸ ಹಿಸ್ಟರಿ ಕ್ರಿಯೇಟ್​​ ಮಾಡಿದೆ.

ಸಿನಿಮಾ ರಿಲೀಸ್​​ಗೂ ಮುನ್ನ ಬಿಟಿವಿಗೆ ನೀಡಿದ ಸಂದರ್ಶನದಲ್ಲಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ಧ್ರುವ ಸರ್ಜಾ ಅವರು, ಸಿನಿಮಾವನ್ನು ನಾನು ನೋಡುವಾಗ ಸಿನಿಮಾದ ಹೀರೋ ರವಿ ಬಸ್ರೂರು ಅಂತ ಅನ್ಸುತ್ತೆ. ಯಾಕಂದ್ರೆ ತುಂಬಾ ಚೆನ್ನಾಗಿ ಮ್ಯೂಸಿಕ್​​ ಮಾಡಿದ್ದಾರೆ. ಸ್ಪೆಷಲಿ ರೀ ರೆಕಾರ್ಡಿಂಗ್​. ತುಂಬಾನೇ ಡಿಟೈಲ್​​ ವರ್ಕ್​ ಮಾಡಿದ್ದಾರೆ. ಹೀಗಾಗಿ ಈ ಸಿನಿಮಾದ ಹೀರೋ ನಾನಲ್ಲ ರವಿ ಬಸ್ರೂರು. ಇನ್ನು ರವಿವರ್ಮ ಅವರು , ರಾಮ್ ಲಕ್ಷ್ಮಣ್ ಹಾಗೂ ಸತ್ಯ ಹೆಗಡೆ ತುಂಬಾ ಚೆನ್ನಾಗಿ ವರ್ಕ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಮಾರ್ಟಿನ್ ಚಿತ್ರಕ್ಕೆ ಖ್ಯಾತ ಬಹುಭಾಷಾ ನಟ ಅರ್ಜುನ್‌ ಸರ್ಜಾ ಕಥೆ ಬರೆದಿದ್ದು, ವಾಸವಿ ಎಂಟರ್‌ಪ್ರೈಸಸ್ ಲಾಂಛನದಲ್ಲಿ ಉದಯ್ ಕೆ. ಮೆಹ್ತಾ ಈ ಚಿತ್ರ ನಿರ್ಮಿಸಿದ್ದಾರೆ. ಎಪಿ ಅರ್ಜುನ್ ನಿರ್ದೇಶನದ ‘ಮಾರ್ಟಿನ್’ ಸಿನಿಮಾದಲ್ಲಿ ಧ್ರುವ ಸರ್ಜಾಗೆ ಜೋಡಿಯಾಗಿ ವೈಭವಿ ಶಾಂಡಿಲ್ಯ ನಟಿಸಿದ್ದಾರೆ.

ಸತ್ಯ ಹೆಗಡೆ ಛಾಯಾಚಿತ್ರಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರವಿವರ್ಮ, ರಾಮ್ ಲಕ್ಷ್ಮಣ್ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಚಿತ್ರದ ತಾರಾಬಳಗದಲ್ಲಿ ಅನ್ವೇಶಿ ಜೈನ್, ಜಾರ್ಜಿಯ ಆಂಡ್ರಿಯಾನಿ, ಚಿಕ್ಕಣ್ಣ, ಮಾಳವಿಕ ಅವಿನಾಶ್, ನಿಕ್ತಿನ್ ಧೀರ್, ನವಾಬ್ ಶಾ, ರೋಹಿತ್ ಪಾಠಕ್ ಮುಂತಾದವರಿದ್ದಾರೆ.

ಇದನ್ನೂ ಓದಿ : ದರ್ಶನ್​ಗೆ ದಸರಾಗೂ ಸಿಗಲಿಲ್ಲ ಬೇಲ್.. ಮತ್ತೆ ವಿಚಾರಣೆ ಮುಂದೂಡಿದ ಕೋರ್ಟ್..!

Leave a Comment

DG Ad

RELATED LATEST NEWS

Top Headlines

ಸಿ.ಟಿ ರವಿ ಅದ್ಧೂರಿ ಸ್ವಾಗತ ವೇಳೆ ಆ್ಯಂಬುಲೆನ್ಸ್​ಗಳ ದುರ್ಬಳಕೆ – ಚಾಲಕರು & ಮಾಲೀಕರ ಮೇಲೆ FIR ದಾಖಲು..!

ಚಿಕ್ಕಮಗಳೂರು : ಸಿ.ಟಿ ರವಿ ಅದ್ಧೂರಿ ಸ್ವಾಗತ ವೇಳೆ ಆ್ಯಂಬುಲೆನ್ಸ್​ಗಳ ದುರ್ಬಳಕೆ ಮಾಡಿದ ಸಂಬಂಧ ಆ್ಯಂಬುಲೆನ್ಸ್​​ ಚಾಲಕರು ಮತ್ತು ಮಾಲೀಕರ ಮೇಲೆ FIR ದಾಖಲಾಗಿದೆ. 7 ಆ್ಯಂಬುಲೆನ್ಸ್​​

Live Cricket

Add Your Heading Text Here