ನವದೆಹಲಿ : ಸಿಎನ್‌ಜಿ ಬಳಕೆದಾರರಿಗೆ ಮತ್ತೊಮ್ಮೆ ಬೆಲೆ ಏರಿಕೆಯ ಶಾಕ್ ಎದುರಾಗಿದೆ. ದೆಹಲಿಯಲ್ಲಿ ಇಂದು ಬೆಳಗ್ಗೆ 6 ಗಂಟೆಯಿಂದ ಜಾರಿಗೆ ಬರುವಂತೆ CNG ಬೆಲೆಯನ್ನು 2 ರೂ. ಗಳಷ್ಟು ಹೆಚ್ಚಿಸಲಾಗಿದೆ.
ಈ ಪರಿಷ್ಕರಣೆಯೊಂದಿಗೆ ರಾಜಧಾನಿ ದೆಹಲಿಯಲ್ಲಿ ಸಿಎನ್‌ಜಿ ದರವು ಕೆಜಿಗೆ ರೂ.83.09ಕ್ಕೆ ಏರಿಕೆಯಾಗಿದೆ. ಕಳೆದ ಎರಡು ವಾರಗಳೊಳಗೆ ಇದು ನಾಲ್ಕನೇ ಬಾರಿ ನಡೆದ ಬೆಲೆ ಏರಿಕೆಯಾಗಿದ್ದು, ಮೇ 15ರಿಂದ ಇಲ್ಲಿಯವರೆಗೆ ಒಟ್ಟು ರೂ.5 ಪ್ರತಿ ಕೆಜಿಗೆ ಹೆಚ್ಚಳವಾಗಿದೆ.
ಮೇ 15ರಂದು ರೂ.2, ಮೇ 17ರಂದು ರೂ.1, ಮೇ 23ರಂದು ರೂ.1 ಹಾಗೂ ಇದೀಗ ಮೇ 26ರಂದು ಮತ್ತೊಮ್ಮೆ ರೂ.2 ಹೆಚ್ಚಳ ಮಾಡಲಾಗಿದೆ. ಕೇವಲ 11 ದಿನಗಳ ಅವಧಿಯಲ್ಲಿ ನಾಲ್ಕು ಬಾರಿ ದರ ಪರಿಷ್ಕರಣೆ ನಡೆದಿರುವುದು ಗ್ರಾಹಕರಿಗೆ ಶಾಕ್ ನೀಡಿದಂತಾಗಿದೆ.
ಹೊಸ ದರಗಳ ಪ್ರಕಾರ ದೆಹಲಿಯಲ್ಲಿ ಸಿಎನ್‌ಜಿ ದರ ಕೆಜಿಗೆ ರೂ.83.09 ಆಗಿದೆ. ನೋಯ್ಡಾ, ಗ್ರೇಟರ್ ನೋಯ್ಡಾ ಹಾಗೂ ಗಾಜಿಯಾಬಾದ್ ಪ್ರದೇಶಗಳಲ್ಲಿ ದರವು ರೂ.88.70ಕ್ಕೆ ತಲುಪಿದ್ದು, ಗುರುಗ್ರಾಮದಲ್ಲಿ ರೂ.86.12 ಪ್ರತಿ ಕೆಜಿ ನಿಗದಿಯಾಗಿದೆ. ಮುಂಬೈನಲ್ಲಿ ಸಿಎನ್‌ಜಿ ದರವು ರೂ.84 ಪ್ರತಿ ಕೆಜಿಯಾಗಿದೆ.
ಇದನ್ನೂ ಓದಿ : ಸಮಾಜ ಸೇವೆಯೇ ಜೆಡಿಎಸ್ ಸೇರ್ಪಡೆಯ ಉದ್ದೇಶ – ನಟಿ ಜಾಹ್ನವಿ ಫಸ್ಟ್ ರಿಯಾಕ್ಷನ್!








