ಕೇಂದ್ರ ಸಚಿವಾಲಯಗಳ ಪೈಕಿ ಪ್ರಹ್ಲಾದ್‌ ಜೋಶಿ ಇಲಾಖೆ ನಂಬರ್.1

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ವಿವಿಧ ಇಲಾಖೆಗಳ ಮೌಲ್ಯಮಾಪನ ಮಾಡಿ ರ್‍ಯಾಂಕಿಂಗ್‌ ನೀಡಿದ್ದು, ಇದರ ಆಧಾರದ ಮೇಲೆ ಸಚಿವರಾದ ಪ್ರಹ್ಲಾದ್‌ ಜೋಶಿ ಅವರ ಗ್ರಾಹಕರ ವ್ಯವಹಾರ ಸಚಿವಾಲಯ ಪ್ರಥಮ ಸ್ಥಾನ ಪಡೆದಿದೆ.

ಜೋಶಿ ಅವರ ಗ್ರಾಹಕರ ವ್ಯವಹಾರಗಳ ಇಲಾಖೆಯು ಗ್ರಾಹಕರ ಕುಂದು-ಕೊರತೆ ಪರಿಹಾರ ಮತ್ತು ಪಶ್ಚಿಮ ಏಷ್ಯಾ ಯುದ್ದದಿಂದಾಗಿ ಎದುರಾಗಿರುವ ಬಿಕ್ಕಟ್ಟು ನಿಭಾಯಿಸುವ ವಿಚಾರದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಇಲಾಖೆ ಎಂಬ ಗೌರವಕ್ಕೆ ಪಾತ್ರವಾಗಿದೆ.

ಪ್ರಹ್ಲಾದ್‌ ಜೋಶಿ ಅವರ ಇಲಾಖೆಯು ಪಶ್ಚಿಮ ಏಷ್ಯಾ ಯುದ್ಧದ ಹಿನ್ನೆಲೆಯಲ್ಲಿ ದೇಶದಲ್ಲುಂಟಾಗಿದ್ದ ಆರ್ಥಿಕ ಮತ್ತು ಪೂರೈಕೆ ಬಿಕ್ಕಟ್ಟನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದೆ. ಮತ್ತು ಗ್ರಾಹಕರ ಕುಂದು-ಕೊರತೆಗಳ ನಿವಾರಣೆಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಕಾರಣಕ್ಕಾಗಿ ಈ ಇಲಾಖೆಗೆ ಅತ್ಯುನ್ನತ ಗೌರವ ಸಂದಿದೆ.

ಪ್ರಧಾನಿ ಮೋದಿ ಅವರ ವಿಕಸಿತ ಭಾರತದ ಸಂಕಲ್ಪವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸಚಿವ ಶ್ರೀ ಪ್ರಲ್ಹಾದ್ ಜೋಶಿ ರಾಷ್ಟ್ರಮಟ್ಟದಲ್ಲಿ ಗಮನಾರ್ಹ ಕಾರ್ಯದಕ್ಷತೆ ಪ್ರದರ್ಶಿಸುತ್ತಿದ್ದು, ಅವರಿಗೆ ದೇಶಾದ್ಯಂತ ವ್ಯಾಪಕ ಅಭಿನಂದನೆಗಳು ಹರಿದುಬರುತ್ತಿವೆ.

ಇದನ್ನೂ ಓದಿ : ರೇಣುಕಾಸ್ವಾಮಿ ಕೊಲೆ ಕೇಸ್ – ಇಂದಿನಿಂದ ಸೆಷನ್ಸ್‌ ಕೋರ್ಟ್‌ನಲ್ಲಿ ವಿಚಾರಣೆ ಆರಂಭ!

Btv Kannada
Author: Btv Kannada

Leave a Comment

Read More

Read More