ರಾಜ್ಯದಲ್ಲಿ ಕಾರ್ಮಿಕರ ಕನಿಷ್ಠ ವೇತನದಲ್ಲಿ ಶೇ 60ರಷ್ಟು ಹೆಚ್ಚಳ!

ಬೆಂಗಳೂರು: ಕರ್ನಾಟಕ ಸರ್ಕಾರ ಕಾರ್ಮಿಕರ ಕನಿಷ್ಠ ವೇತನವನ್ನು ಶೇಕಡಾ 60 ರಷ್ಟು ಹೆಚ್ಚಿಸಿ ಅಧಿಸೂಚನೆ ಹೊರಡಿಸಿದೆ.

ರಾಜ್ಯದ ಅಸಂಘಟಿತ ವಲಯ ಹಾಗೂ ನಿರ್ದಿಷ್ಟ ವಲಯಗಳ ಕಾರ್ಮಿಕರ ಕನಿಷ್ಠ ವೇತನವನ್ನು ಸರಾಸರಿ ಶೇ.60ರಷ್ಟು ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಲಾಗಿದೆ. ಕನಿಷ್ಠ ವೇತನ ನಿರ್ಧರಿಸುವಾಗ ಸುಪ್ರೀಂ ಕೋರ್ಟ್ ನ್ಯಾಯ ಪೀಠದ ನಿರ್ದೇಶನವನ್ನು ಪಾಲಿಸಿ, ಈ ಪರಿಷ್ಕರಣೆ ಮಾಡಲಾಗಿದೆ. 

ಈ ಮೊದಲಿದ್ದ ನಾಲ್ಕು ವಲಯಗಳ ವರ್ಗೀಕರಣದ ಬದಲಾಗಿ ಇದೇ‌ ಮೊದಲ ಬಾರಿಗೆ ಎಲ್ಲ ನಿಗದಿತ ಉದ್ಯೋಗಗಳನ್ನು ಒಂದೇ ಅಧಿಸೂಚನೆಯಡಿ ತರಲಾಗಿದೆ.

ಬೆಂಗಳೂರು (ವಲಯ-1) ವ್ಯಾಪ್ತಿಯಲ್ಲಿ ಉನ್ನತ ಕುಶಲ ಕಾರ್ಮಿಕರಿಗೆ 31,114 ರೂ., ಕುಶಲ ಕಾರ್ಮಿಕರಿಗೆ 28,285 ರೂ., ಅರೆ-ಕುಶಲ ಕಾರ್ಮಿಕರಿಗೆ 25,714 ರೂ. ಮತ್ತು ಅಕುಶಲ ಕಾರ್ಮಿಕರಿಗೆ 23,376 ರೂ. ಮಾಸಿಕ ಕನಿಷ್ಠ ವೇತನ ಸಿಗಲಿದೆ. ಗ್ರಾಮೀಣ ಮತ್ತು ಸಣ್ಣ ಪಟ್ಟಣಗಳಲ್ಲಿ ಅಕುಶಲ ಕಾರ್ಮಿಕರಿಗೆ ಕನಿಷ್ಠ ಮಾಸಿಕ ವೇತನವನ್ನು 19,319 ರೂ. ಹಾಗೂ ಉನ್ನತ ಕುಶಲ ಕಾರ್ಮಿಕರಿಗೆ 25,714 ರೂ. ನಿಗದಿಪಡಿಸಲಾಗಿದೆ.

ಇದನ್ನೂ ಓದಿ : ಹೊಂಬಾಳೆ ಮ್ಯೂಸಿಕ್ ತೆಕ್ಕೆಗೆ ‘ದೇವಿ‌ ಮಹಾತ್ಮೆ’ ಆಡಿಯೋ ಹಕ್ಕು!

Btv Kannada
Author: Btv Kannada

Leave a Comment

Read More

Read More