ದೇಶದ ಜನರಿಗೆ ಮತ್ತೆ ದರ ಏರಿಕೆ ಶಾಕ್ – ಪೆಟ್ರೋಲ್ 87, ಡೀಸೆಲ್ 91 ಪೈಸೆ ಹೆಚ್ಚಳ!

ನವದೆಹಲಿ : ದೇಶದಲ್ಲಿ ವಾಹನ ಸವಾರರಿಗೆ ಮತ್ತೊಮ್ಮೆ ಇಂಧನ ದರ ಏರಿಕೆಯ ಬಿಸಿ ತಟ್ಟಿದೆ. 10 ದಿನಗಳಲ್ಲಿ ಮೂರನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ಮಾಡಿದ್ದು, ಇಂದು ಪ್ರತಿ ಲೀಟರ್ ಇಂಧನ ಬೆಲೆಯಲ್ಲಿ ಗರಿಷ್ಠ 91 ಪೈಸೆವರೆಗೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 107.14 ರೂ. ಹಾಗೂ ಡೀಸೆಲ್ ಬೆಲೆ 95.04 ರೂ. ಆಗಿದೆ. ಪೆಟ್ರೋಲ್ ಬೆಲೆ ಈಗ ಲೀಟರ್‌ಗೆ 99.51 ರೂ., ಡೀಸೆಲ್ ಬೆಲೆ ಲೀಟರ್‌ಗೆ 92.49 ರೂ. ಆಗಿದೆ. ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾಗಿದೆ. ಈ ಹಿನ್ನೆಲೆ ಮೇ 15 ರಿಂದ ಈಚೆಗೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ದರವನ್ನು ಹೆಚ್ಚಿಸಿವೆ.

ಮೇ 15 ರಂದು ಬೆಲೆಗಳನ್ನು ಲೀಟರ್‌ಗೆ 3 ರೂ. ಹೆಚ್ಚಿಸಲಾಯಿತು. ನಂತರ ಮೇ 19 ರಂದು 90 ಪೈಸೆ ಹೆಚ್ಚಳವಾಯಿತು. ಒಟ್ಟಾರೆಯಾಗಿ, ದರಗಳು ಲೀಟರ್‌ಗೆ ಸುಮಾರು 5 ರೂ.ಗಳಷ್ಟು ಹೆಚ್ಚಾಗಿದೆ.

ಎಲ್ಲೆಲ್ಲಿ ದರ ಎಷ್ಟು?
ಪೆಟ್ರೋಲ್‌
ದೆಹಲಿ: 99.51 (+0.87)
ಕೋಲ್ಕತ್ತಾ: 110.64 (+0.94)
ಮುಂಬೈ: 108.49 (+0.90)
ಚೆನ್ನೈ: 105.31 (+0.82)

ಡೀಸೆಲ್

ದೆಹಲಿ: 92.49 (+0.91)
ಕೋಲ್ಕತ್ತಾ: 97.02 (+0.95)
ಮುಂಬೈ: 95.02 (+0.94)
ಚೆನ್ನೈ: 96.98 (+0.87)

ಇದನ್ನೂ ಓದಿ : ಮೌಂಟ್ ಎವರೆಸ್ಟ್ ಶಿಖರದಿಂದ ಕೆಳಗಿಳಿಯುವಾಗ ಇಬ್ಬರು ಭಾರತೀಯ ಪರ್ವತಾರೋಹಿಗಳು ಸಾವು!

Btv Kannada
Author: Btv Kannada

Leave a Comment

Read More