ಬೆಂಗಳೂರು : ಪೆಟ್ರೋಲ್, ಡಿಸೇಲ್ ಮೇಲಿನ ರಾಜ್ಯ ತೆರಿಗೆಯನ್ನು ಕಡಿತ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಸಿದ್ಧರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಸಿಎಂ ಸಿದ್ಧರಾಮಯ್ಯ ಮಾತನಾಡಿ, ಕೇಂದ್ರದವರು ಏರಿಸೋದು ನಾವು ಕಡಿಮೆ ಮಾಡೋದಾ? ಅವರು ಏರಿಕೆ ಮಾಡಿದ್ರು ನೀವು ಕೇಳೋದೆ ಇಲ್ಲ. ನಾವು ಕಡಿಮೆ ಮಾಡ್ತೀರಾ ಅಂತ ಪ್ರಶ್ನೆ ಕೇಳ್ತೀರಾ ಹೊರತು ಅವರು ಯಾಕೆ ಜಾಸ್ತಿ ಮಾಡಿಲ್ಲ ಅಂತ ಕೇಳಲ್ಲ ಎಂದು ಪ್ರಶ್ನೆ ಮಾಡಿದರು.
ಮೋದಿ ಅಧಿಕಾರಕ್ಕೆ ಬಂದಾಗ ಎಷ್ಟು ಇತ್ತು? ಮನಮೋಹನ್ ಸಿಂಗ್ ಇದ್ದಾಗ ಪೆಟ್ರೋಲ್ 70 ರೂ. ಡಿಸೇಲ್ 48 ರೂ. ಇತ್ತು. ಗ್ಯಾಸ್ ಬೆಲೆ 414 ರೂ. ಇತ್ತು. ಈಗ ಎಷ್ಟು ಆಗಿದೆ? ಯಾರು ಜಾಸ್ತಿ ಮಾಡಿದ್ದು ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಇಂದಿನಿಂದ 4 ದಿನ ರಾಜ್ಯಾದ್ಯಂತ ಭಾರೀ ಮಳೆ ಮುನ್ಸೂಚನೆ – ಬೆಂಗಳೂರಲ್ಲಿ ಇಂದು ಆರೆಂಜ್ ಅಲರ್ಟ್!
Author: Btv Kannada
Post Views: 583









