Download Our App

Follow us

Home » ಅಪರಾಧ » ಬೆಂಗಳೂರಿನಲ್ಲಿ ಯುವಕನ ಮೇಲೆ ಆ್ಯಸಿಡ್​​ ದಾಳಿ ನಡೆಸಿ ದುಷ್ಕರ್ಮಿಗಳು ಎಸ್ಕೇಪ್​..!

ಬೆಂಗಳೂರಿನಲ್ಲಿ ಯುವಕನ ಮೇಲೆ ಆ್ಯಸಿಡ್​​ ದಾಳಿ ನಡೆಸಿ ದುಷ್ಕರ್ಮಿಗಳು ಎಸ್ಕೇಪ್​..!

ಬೆಂಗಳೂರು : ನಿನ್ನೆ ಮಟ ಮಟ ಮಧ್ಯಾಹ್ನವೇ ಯುವಕನೋರ್ವನ ಮೇಲೆ ದುಷ್ಕರ್ಮಿಗಳು ಆ್ಯಸಿಡ್ ಅಟ್ಯಾಕ್ ಮಾಡಿ ಎಸ್ಕೇಪ್ ಆಗಿರೋ ಘಟನೆ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಬಾಲಾಜಿ ವೈನ್ ಸ್ಟೊರ್ ಬಳಿ ನಡೆದಿದೆ.

ಉತ್ತರಭಾರತ ಮೂಲದ ಯುವಕ ಆ್ಯಸಿಡ್ ಅಟ್ಯಾಕ್​ಗೆ ಒಳಗಾದವ. ಸದ್ಯ ಗಾಯಾಳು ಯುವಕನನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳು ಹೇಳಿಕೆ ದಾಖಲಿಸಿ ದೂರು ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಆ್ಯಸಿಡ್​ ದಾಳಿಯಲ್ಲಿ ಇದು 2 ದಾಳಿಯಾಗಿದೆ. ಈ ಹಿಂದೆ ನಡೆದಿದ್ದ ಆ್ಯಸಿಡ್​ ದಾಳಿ ಇಡೀ ಬೆಂಗಳೂರನ್ನು ಬೆಚ್ಚಿಬೀಳಿಸಿತ್ತು. 2022ರಲ್ಲಿ ಹಾಡಹಗಲೇ ಯುವತಿ ಮೇಲೆ ಆ್ಯಸಿಡ್​ ದಾಳಿ ನಡೆದಿತ್ತು.

ಆರೋಪಿ ನಾಗ ಯುವತಿ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದ. ಯುವತಿ ಮೇಲಿನ ಆ್ಯಸಿಡ್ ದಾಳಿ ಪ್ರಕರಣ ರಾಜ್ಯಾದ್ಯಂತ ಭಾರಿ ಚರ್ಚೆ ಆಗಿತ್ತು. ಆರೋಪಿಯನ್ನು ಬಂಧಿಸುವಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ಯಶಸ್ವಿಯಾಗಿದ್ದರು. ಈಗ ಇದೇ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಆ್ಯಸಿಡ್​ ದಾಳಿ ನಡೆದಿದೆ.

ಇದನ್ನೂ ಓದಿ : ಮಹಾಲಕ್ಷ್ಮಿಯನ್ನು 50 ಪೀಸ್​ ಮಾಡಿದ ರಾಕ್ಷಸನಿಗೆ ತೀವ್ರ ಹುಡುಕಾಟ – ಪೊಲೀಸರ ಪ್ಲಾನ್ ಏನೇನು?

Leave a Comment

DG Ad

RELATED LATEST NEWS

Top Headlines

ನಾನು ಮುಡಾ ಫೈಲ್​​​ಗಳನ್ನು ತಂದಿಲ್ಲ, ದೇವರ ಮುಂದೆ ಆಣೆ ಮಾಡೋಕೆ ನಾನ್​ ರೆಡಿ – ಸಚಿವ ಭೈರತಿ ಸುರೇಶ್..!

ಬೆಂಗಳೂರು : ಇಡೀ ರಾಜ್ಯದಲ್ಲೇ ದೊಡ್ಡ ಸುದ್ದಿಯಾಗಿದ್ದ ಮುಡಾ ಹಗರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಮೈಸೂರು ಮುಡಾ ಕಚೇರಿ ಮೇಲೆ ದಾಳಿ ಮಾಡಿದ್ದಾರೆ.

Live Cricket

Add Your Heading Text Here