ಬೆಂಗಳೂರಿನ ಇಬ್ಬರು ಪೊಲೀಸ್ ಇನ್‌ಸ್ಪೆಕ್ಟರ್​ಗಳಿಗೆ ಸಂಕಷ್ಟ – ಮಾನವ ಹಕ್ಕು ಆಯೋಗದ ದಿಢೀರ್ ದಾಳಿ.. ಅಕ್ರಮ ಬಂಧನ ಬಯಲು!

ಬೆಂಗಳೂರು : ರಕ್ಷಣೆ ಮಾಡಬೇಕಾಗಿರುವ ಪೊಲೀಸ್ ಇನ್‌ಸ್ಪೆಕ್ಟರ್‌ಗಳೇ ಕಾನೂನು ಉಲ್ಲಂಘಿಸಿರುವ ಆರೋಪ ಕೇಳಿಬಂದಿದೆ. ಆರ್‌ಎಂಸಿ ಯಾರ್ಡ್ ಮತ್ತು ಕೊತ್ತನೂರು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌ಗಳು ಆರೋಪಿಗಳನ್ನು ಅಕ್ರಮವಾಗಿ ಬಂಧನದಲ್ಲಿಟ್ಟಿದ್ದ ವಿಷಯ ಇದೀಗ ಬೆಳಕಿಗೆ ಬಂದಿದ್ದು, ಮಾನವ ಹಕ್ಕು ಆಯೋಗದ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಇಬ್ಬರು ಇನ್‌ಸ್ಪೆಕ್ಟರ್‌ಗಳನ್ನು ರೆಡ್​ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಆರ್‌ಎಂಸಿ ಯಾರ್ಡ್ ಠಾಣೆಯ ಇನ್‌ಸ್ಪೆಕ್ಟರ್ ಚಂದ್ರಪ್ಪ ಅವರು ರಾಜೇಶ್ ಕುಮಾರ್ ಮೆಹ್ತಾ ಎಂಬ ವ್ಯಕ್ತಿಯನ್ನು ಸತತ ಎರಡು ದಿನಗಳಿಂದ FIR ದಾಖಲಿಸದೆ ಅಕ್ರಮವಾಗಿ ಠಾಣೆಯಲ್ಲೇ ಕೂಡಿಟ್ಟಿದ್ದರು. ಅಷ್ಟೇ ಅಲ್ಲದೆ ವ್ಯಕ್ತಿಯಿಂದ ಒಂದು ಕೆಜಿ ಚಿನ್ನ ನೀಡುವಂತೆ ಡಿಮ್ಯಾಂಡ್ ಮಾಡಿದ್ದಾರೆ.

ಇನ್ನೊಂದೆಡೆ, ಕೊತ್ತನೂರು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮಂಜುನಾಥ್ ಅವರು ಪರ್ದಿನ ಪಾಷಾ ಎಂಬ ವ್ಯಕ್ತಿಯನ್ನು ಯಾವುದೇ ದೂರು ಅಥವಾ ಎಫ್‌ಐಆರ್ ಇಲ್ಲದೆ ಸತತ ಮೂರು ದಿನಗಳಿಂದ ಕಾನೂನು ಬಾಹಿರವಾಗಿ ಠಾಣೆಯ ವಶದಲ್ಲಿಟ್ಟುಕೊಂಡಿದ್ದರು.

ಮಾನವ ಹಕ್ಕು ಆಯೋಗದ DySP ಸುಧೀರ್ ಹೆಗಡೆ ಅವರ ನೇತೃತ್ವದ ತಂಡ ಇಂದು ಮಧ್ಯಾಹ್ನ 3 ಗಂಟೆಗೆ ಎರಡೂ ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿದೆ. ಈ ವೇಳೆ ಯಾವುದೇ ಅಧಿಕೃತ ದೂರು ಅಥವಾ ಎಫ್‌ಐಆರ್ ಇಲ್ಲದೆ ರಾಜಕುಮಾರ್ ಮೆಹ್ತಾ ಮತ್ತು ಪರ್ದಿನ ಪಾಷಾ ಅವರನ್ನು ಅಕ್ರಮವಾಗಿ ಬಂಧನದಲ್ಲಿಟ್ಟಿರುವುದು ಬೆಳಕಿಗೆ ಬಂದಿದೆ.

ಸಾರ್ವಜನಿಕರ ರಕ್ಷಣೆ ಮಾಡಬೇಕಾದ ಪೊಲೀಸರೇ ಈ ರೀತಿ ಕಾನೂನು ಉಲ್ಲಂಘಿಸಿದ್ದಾರೆ. ಸಿಕ್ಕಿಬಿದ್ದ ಇಬ್ಬರೂ ಪೊಲೀಸ್ ಇನ್ಟ್​ಪೆಕ್ಟರ್​ಗಳು ಯಾವುದೇ ಕ್ಷಣದಲ್ಲಿ ಅರೆಸ್ಟ್ ಆಗುವ ಸಾಧ್ಯತೆಯಿದೆ.

ಇದನ್ನೂ ಓದಿ : ಹೈಕೋರ್ಟ್​​ ಆದೇಶದ ಬೆನ್ನಲ್ಲೇ ಮುಷ್ಕರ ಹಿಂಪಡೆದ ಸಾರಿಗೆ ನೌಕರರು!

Btv Kannada
Author: Btv Kannada

Leave a Comment

Read More

Read More