ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಕನ್ನಡದ ಕಿರುತೆರೆ ನಟಿ ಕವಿತಾ ಗೌಡ ಹಾಗೂ ಚಂದನ್ ಕುಮಾರ್ಗೆ ಗಂಡು ಮಗು ಜನಿಸಿದೆ. ಇದೀಗ ಮಗುವಿನ ಕಾಲಿನ ಒಂದು ವಿಡಿಯೋ ಶೇರ್ ಮಾಡಿಕೊಂಡು, ನಮ್ಮ ಮುದ್ದು ಕಂದಮ್ಮ ಧರೆಗಿಳಿದಿದ್ದಾನೆ ಅಂತ ಚಂದನ್ ಕುಮಾರ್ ಬರೆದುಕೊಂಡಿದ್ದಾರೆ.
ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ ಖ್ಯಾತಿ ಪಡೆದುರುವ ಈ ಸ್ಟಾರ್ ಜೋಡಿ ಚೊಚ್ಚಲ ಗಂಡು ಮಗುವಿಗೆ ವೆಲ್ಕಮ್ ಹೇಳಿದ್ದಾರೆ. ಚಂದನ್ ಕುಮಾರ್ ತಮ್ಮ ಇನ್ಸ್ಟಾದಲ್ಲಿ ವಿಡಿಯೋವೊಂದನ್ನ ಪೋಸ್ಟ್ ಮಾಡಿ ಮಗನ ಆಗಮನದ ಖುಷಿಯನ್ನ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮಗುವಿನ ಕಾಲುಗಳು ಮಾತ್ರ ಕಾಣುತ್ತಿದ್ದು, ಮಗುವಿನ ಮುಖವನ್ನು ರಿವೀಲ್ ಮಾಡಿಲ್ಲ.
ನಟಿ ಕವಿತಾ ಗೌಡ ಅವರ ಸೀಮಂತ ಅದ್ಧೂರಿಯಾಗಿಯೇ ನಡೆದಿತ್ತು. ಒಂದು ಮದುವೆ ಸಂಭ್ರಮದ ರೀತಿನೇ ಆಗಿತ್ತು. ಈ ಸೀಮಂತದ ಫೋಟೋಗಳು ಕೂಡ ಹೆಚ್ಚು ಗಮನ ಸೆಳೆದಿದ್ದರು. ಇದಕ್ಕೂ ಮೊದಲು ಚಂದನ್ ಮತ್ತು ಕವಿತಾ ಅವರ ವಿಶೇಷ ಫೋಟೋ ಶೂಟ್ ಕೂಡ ಹೆಚ್ಚು ಇಂಟ್ರಸ್ಟಿಂಗ್ ಆಗಿಯೇ ಕಾಣಿಸಿಕೊಂಡಿದ್ದವು.
ಇದನ್ನೂ ಓದಿ : ಟ್ರಿಪ್ಗೆ ಬಂದ್ರೆ ನಾಯಕಿ ಮಾಡ್ತೀವಿ ಎಂದಿದ್ರಂತೆ – ನಟಿ ಚೈತ್ರಾ ಆಚಾರ್ ಶಾಕಿಂಗ್ ಹೇಳಿಕೆ..!