ಬೆಂಗಳೂರು : ಬೆತ್ತಲೆ ಕ್ರೌರ್ಯ ಮೆರೆದಿದ್ದ ರೌಡಿಶೀಟರ್ ಪವನ್ ಅಲಿಯಾಸ್ ಕಡುಬು ಕಾಲಿಗೆ ಕಾಮಾಕ್ಷಿಪಾಳ್ಯ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ರೌಡಿಶೀಟರ್ ಪವನ್, ಕಳೆದ 10-12 ದಿನಗಳ ಹಿಂದೆ ಯುವಕನೋರ್ವನ ಬಟ್ಟೆ ಬಿಚ್ಚಿಸಿ ಹಲ್ಲೆ ಮಾಡಿ ನಡು ರಸ್ತೆಯಲ್ಲಿ ಓಡಿಸಿದ್ದ. ಬಳಿಕ ಹವಾ ಮೇಂಟೇನ್ಗೆ ವಿಡಿಯೋ ಮಾಡಿ ವೈರಲ್ ಮಾಡಿದ್ದ. ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದ್ದಂತೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಬಳಿಕ ಪೊಲೀಸರು ಕೂಡಲೇ ಪವನ್ ಹೆಡೆಮುರಿ ಕಟ್ಟಲು ತನಿಖೆ ಪ್ರಾರಂಭಿಸಿದ್ದರು. ತುಮಕೂರಿನಲ್ಲಿ ಪವನ್ ಅಲಿಯಾಸ್ ಕಡಬು ಅಡಗಿದ್ದ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಹಿರಿಯ ಅಧಿಕಾರಿಗಳು ಪವನ್ ಅರೆಸ್ಟ್ಗೆ ತಂಡ ರಚನೆ ಮಾಡಿ ಅಲ್ಲಿಗೆ ತೆರಳಿ ಪವನ್ನನ್ನು ಬಂಧಿಸಿ ಕರೆತರುವಾಗ ಆತ ಪೊಲೀಸರಿಗೆ ಹಲ್ಲೆ ನಡೆಸಿ ಎಸ್ಕೇಪ್ಗೆ ಯತ್ನಿಸಿದ್ದಾನೆ.
ರೌಡಿ ಪವನ್ ಕಾನ್ಸ್ಟೇಬಲ್ ವೆಂಕಟೇಶ್ ಮೇಲೆ ಹಲ್ಲೆ ನಡೆಸಿ ಎಸ್ಕೇಪ್ ಯತ್ನ ಮಾಡಿದ್ದ. ಈ ವೇಳೆ ಆತ್ಮರಕ್ಷಣೆಗಾಗಿ ರೌಡಿ ಕಾಲಿಗೆ ಗೋವಿಂದರಾಜನಗರ ಇನ್ಸ್ಪೆಕ್ಟರ್ ಸುಬ್ರಹ್ಮಣಿ ಅವರು ಫೈರಿಂಗ್ ಮಾಡಿದ್ದಾರೆ. ರೌಡಿ ಪವನ್ ವಾರೆಂಟ್ ಇದ್ರೂ ತಲೆಮರೆಸಿಕೊಂಡು ಓಡಾಡುತ್ತಿದ್ದ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ : 10 ವರ್ಷಗಳ ಬಳಿಕ ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದು ಕ್ಯಾಬಿನೆಟ್ ಮೀಟಿಂಗ್..!