ದಾವಣಗೆರೆ : ವಿಜಯಪುರ ಬೆನ್ನಲ್ಲೇ ದಾವಣಗೆರೆಯಲ್ಲೂ ವಕ್ಫ್ ಜಟಾಪಟಿ ಶುರುವಾಗಿದ್ದು, ಆರಂಭದಲ್ಲಿ ರೈತರ ಜಮೀನಿನಿಂದ ಆರಂಭವಾದ ಈ ವಕ್ಫ್ ಆಸ್ತಿ ವಿವಾದದ ಬಳಿಕ ಮಠ ಹಾಗೂ ಹಿಂದೂ ದೇವಾಲಯಗಳಿಗೂ ನೋಟಿಸ್ ನೀಡುವ ಮೂಲಕ ಆತಂಕ ಹೆಚ್ಚಿಸಿತ್ತು. ಇದೀಗ ದಾವಣಗೆರೆ ನಗರದ ಜನರ ನಿದ್ದೆಗೆಡಿಸಿದೆ.
9 ವರ್ಷದ ಹಿಂದೆ ದಾವಣಗೆರೆಯ ಪ್ರತಿಷ್ಠಿತ ಬಡಾವಣೆ ಪಹಣಿಯಲ್ಲೂ ವಕ್ಫ್ ಸೇರ್ಪಡೆಯಾಗಿದೆ. ನಗರದ ಎ.ವಿ.ಕೆ ಕಾಲೇಜು ರಸ್ತೆಯ ಪಿಜೆ ಬಡಾವಣೆಯ ಸರ್ವೇ ನಂಬರ್ 53ರಲ್ಲಿನ 4 ಎಕರೆ 13 ಗುಂಟೆ ಪ್ರದೇಶ ಖಬರಸ್ಥಾನ ಸುನ್ನಿ ವಕ್ಫ್ ಸಂಸ್ಥೆ ಹೆಸರಲ್ಲಿ 2015ರಲ್ಲಿ ನೋಂದಣೆಯಾಗಿರುವುದು ಈಗ ಬಹಿರಂಗಗೊಂಡಿದೆ.
2015ರಲ್ಲಿ ಕೋರ್ಟ್ ಆದೇಶದಂತೆ ಮ್ಯೂಟೇಷನ್ ಅಂತ ಉಲ್ಲೇಖಿಸಲಾಗಿದೆ. ಪಿ.ಜೆ ಬಡಾವಣೆಯ ಒಂದು ಏರಿಯಾ ಪೂರ್ತಿ ವಕ್ಫ್ ಹೆಸರಲ್ಲಿದ್ದು, ಇದರಿಂದ ಸ್ಥಳೀಯರಲ್ಲಿ ಆತಂಕ ಹುಟ್ಟಿಕೊಂಡಿದೆ.
ಇದನ್ನೂ ಓದಿ : ಕರ್ನಾಟಕ ಕಾಂಗ್ರೆಸ್ನ ಎಟಿಎಂ ಆಗಿದೆ, 700 ಕೋಟಿ ಸುಲಿಗೆಯಾಗಿದೆ – ಅಬಕಾರಿ ಹಗರಣದ ಬಗ್ಗೆ ಪ್ರಧಾನಿ ಮೋದಿ ಕಿಡಿ..!
Post Views: 13