ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ – ಲೀಟರ್‌ಗೆ 90 ಪೈಸೆ ಹೆಚ್ಚಳ!

ಬೆಂಗಳೂರು : ಮೂರು ದಿನಗಳ ಹಿಂದಷ್ಟೇ ಪೆಟ್ರೋಲ್ ಮತ್ತು ಡೀಸೆಲ್ ದರ ಲೀಟರ್‌ಗೆ 3 ರೂ. ಏರಿಕೆಯಾಗಿದ್ದು, ಇದೀಗ ಮತ್ತೆ ತೈಲ ಕಂಪನಿಗಳು ಪೆಟ್ರೋಲ್‌, ಡೀಸೆಲ್‌ ಬೆಲೆಯನ್ನು ಪ್ರತಿ ಲೀ.ಗೆ ಸುಮಾರು 90 ಪೈಸೆ ಹೆಚ್ಚಿಸಿವೆ. 

ದೆಹಲಿಯಲ್ಲಿ ಪೆಟ್ರೋಲ್ ದರವನ್ನು ಲೀಟರ್‌ಗೆ 97.77ರೂಪಾಯಿಯಿಂದ 98.64 ರೂಪಾಯಿಗೆ ಹೆಚ್ಚಿಸಲಾಗಿದ್ದು, ಡೀಸೆಲ್ ದರವು 90.67 ರೂಪಾಯಿಯಿಂದ 91.58 ರೂಪಾಯಿಗೆ ಏರಿಕೆಯಾಗಿದೆ.

ಮುಂಬೈನಲ್ಲಿ ಪೆಟ್ರೋಲ್ ದರವು 91 ಪೈಸೆ ಏರಿಕೆಯಾಗಿ ಲೀಟರ್‌ಗೆ 107.59 ರೂಪಾಯಿಗೆ ತಲುಪಿದರೆ, ಡೀಸೆಲ್ ದರವು 94 ಪೈಸೆ ಏರಿಕೆಯಾಗಿ 94.08 ರೂಪಾಯಿಗೆ ತಲುಪಿದೆ.

ಕೊಲ್ಕತ್ತಾದಲ್ಲಿ ಪೆಟ್ರೋಲ್ ದರದಲ್ಲಿ ಅತಿ ಹೆಚ್ಚು ಏರಿಕೆ ದಾಖಲಾಗಿದ್ದು, ದರವು 96 ಪೈಸೆ ಏರಿಕೆಯಾಗಿ ಲೀಟರ್‌ಗೆ 109.70 ರೂಪಾಯಿಗೆ ತಲುಪಿದೆ. ಅಲ್ಲಿನ ಡೀಸೆಲ್ ದರವು 94 ಪೈಸೆ ಏರಿಕೆಯಾಗಿ 96.07 ರೂಪಾಯಿಗೆ ತಲುಪಿದೆ.

ಚೆನ್ನೈನಲ್ಲಿ ಪೆಟ್ರೋಲ್ ದರವು 82 ಪೈಸೆ ಏರಿಕೆಯಾಗಿ ಲೀಟರ್‌ಗೆ 104.49 ರೂಪಾಯಿಗೆ ತಲುಪಿದರೆ, ಡೀಸೆಲ್ ದರವು 86 ಪೈಸೆ ಏರಿಕೆಯಾಗಿ 96.11 ರೂಪಾಯಿಗೆ ಏರಿಕೆಯಾಗಿದೆ.

ಇದನ್ನೂ ಓದಿ : “ಇದು ಶಿಸ್ತಿನ ಕ್ರಮವಲ್ಲ, ವೈಯಕ್ತಿಕ ಸೇಡು” – ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ವಿರುದ್ಧ ದೀಪಿಕಾ ರೆಡ್ಡಿ ಕಿಡಿ!

Btv Kannada
Author: Btv Kannada

Leave a Comment

Read More

Read More