ಬೆಳ್ಳಂಬೆಳಗ್ಗೆ ಉದ್ಯಮಿಗಳು, ಬಿಲ್ಡರ್ಸ್​ಗಳಿಗೆ IT ಬಿಗ್ ಶಾಕ್ – ರಾಜ್ಯಾದ್ಯಂತ 30ಕ್ಕೂ ಹೆಚ್ಚು ಕಡೆ ರೇಡ್!

ಬೆಂಗಳೂರು : ಇಂದು ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಉದ್ಯಮಿಗಳು, ಬಿಲ್ಡರ್ಸ್​ಗಳ ಮನೆ-ಕಚೇರಿಗಳ ಮೇಲೆ IT ಅಧಿಕಾರಿಗಳು ದಾಳಿ ನಡಸಿದ್ದು, ಏಕಕಾಲಕ್ಕೆ ಬೆಂಗಳೂರು‌, ಮೈಸೂರು, ಮಂಡ್ಯ ಇಲವಾಲ ಸೇರಿ 30ಕ್ಕೂ ಹೆಚ್ಚು ಕಡೆ ಬೃಹತ್ ರೇಡ್​ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಬೆಳಗ್ಗೆ ಐದು ಗಂಟೆ ಸುಮಾರಿಗೆ ದಾಳಿ‌ ಮಾಡಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ವಾಹನಗಳನ್ನ ಮದುವೆಗೆ ಹೋಗುವಂತೆ ಸಿಂಗರಿಸಿಕೊಂಡು ತೆರಳಿ ರೇಡ್​ ನಡೆಸಿದ್ದು, ಮಾಹಿತಿ ಸೋರಿಕೆ‌ ಆಗಬಹುದು ಎಂಬ ಕಾರಣಕ್ಕೆ ಈ ರೀತಿಯಾಗಿ ದಾಳಿ‌ ಮಾಡಿದ್ದಾರೆ.

ಇನ್ನು IT ಅಧಿಕಾರಿಗಳು ರೇಡ್​​ಗಾಗಿ ಸುಮಾರು 90 ಇನೋವಾ ಕಾರುಗಳನ್ನು ಬಳಕೆ ಮಾಡಿದ್ದಾರೆ. ಉದ್ಯಮಿಗಳು, ಬಿಲ್ಡರ್ಸ್​ಗಳು ಆದಾಯ ತೆರಿಗೆ ವಂಚನೆ ಮಾಡಿರುವ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದ್ದು, ಚೆನ್ನೈ, ದೆಹಲಿ, ಮುಂಬೈನಿಂದಲೂ ಬಂದಿರುವ IT ಅಧಿಕಾರಿಗಳು ಉದ್ಯಮಿಗಳು-ಬಿಲ್ಡರ್ಸ್​ಗಳಿಗೆ ಬೆಳ್ಳಂಬೆಳಗ್ಗೆ ಶಾಕ್​ ನೀಡಿದ್ದಾರೆ.

ಹೆಚ್ಚಿನ ಮಾಹಿತಿ ಅಪ್​ಡೇಟ್​ ಆಗಲಿದೆ…

Btv Kannada
Author: Btv Kannada

Leave a Comment

Read More