ಸ್ಯಾಂಡಲ್ ವುಡ್ ಗೆ JDS ಶಾಸಕ ಸಾರಾ ಮಹೇಶ್ ಎಂಟ್ರಿ!

ಮಾಜಿ ಶಾಸಕ ಸಾರಾ ಮಹೇಶ್ ಗೌರಿ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣ ಮಾಡುವ ಮೂಲಕ ಸ್ಯಾಂಡಲ್‌ವುಡ್‌ಗೆ ಪ್ರವೇಶಿಸಿದ್ದಾರೆ.

ಹೊಸ ಪ್ರತಿಭೆಗಳ ತಂಡಕ್ಕೆ ಸಾಥ್ ನೀಡಿರುವ ಅವರು, ಈ ಚಿತ್ರದ ಮೂಲಕ ಅಧಿಕೃತವಾಗಿ ನಿರ್ಮಾಪಕರಾಗಿ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.

ಕಿಚ್ಚ ಸುದೀಪ್ ಶಿಷ್ಯ ಕಿರಣ್ ವಿಶ್ವನಾಥ್ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಯಾರೇ ನೀನು ಚೆಲುವೆ ಖ್ಯಾತಿಯ ಸಂಗೀತ ಮಾಧವನ್ ಈ ಸಿನಿಮಾದ ಮೂಲಕ ಕಂಬ್ಯಾಕ್ ಮಾಡುತ್ತಿದ್ದು, ಏಳುಮಲೆ ಸಿನಿಮಾ ಖ್ಯಾತಿಯ ಪ್ರಿಯಾಂಕಾ ನಾಯಕಿಯಾಗಿ ನಟಿಸುತ್ತಿದ್ದಾರೆ.

ನಾಯಕಿಯರ ಆಯ್ಕೆ ಅಂತಿಮವಾಗಿದ್ದರೂ, ನಾಯಕನ ಹೆಸರನ್ನು ಚಿತ್ರತಂಡ ಸಸ್ಪೆನ್ಸ್ ಆಗಿ ಇಟ್ಟಿದೆ. ಸದ್ಯದಲ್ಲೇ ಅದ್ಧೂರಿ ಕಾರ್ಯಕ್ರಮದ ಮೂಲಕ ಹೀರೋ ಯಾರು ಎಂಬುದನ್ನು ರಿವೀಲ್ ಮಾಡಲು ತಂಡ ನಿರ್ಧರಿಸಿದೆ. ಸಾರಾ ಮಹೇಶ್ ಅವರ ಈ ಹೊಸ ಪ್ರಯತ್ನ ಸ್ಯಾಂಡಲ್‌ವುಡ್‌ನಲ್ಲಿ ಕುತೂಹಲ ಮೂಡಿಸಿದೆ.

ಇದನ್ನೂ ಓದಿ :ಜೀ5ನ ಬಹುನಿರೀಕ್ಷಿತ ವೆಬ್ ಸರಣಿ – “ರಾಕ್ಷಸ” ವೆಬ್ ಸರಣಿಯ ಟ್ರೇಲರ್ ರಿಲೀಸ್!

Btv Kannada
Author: Btv Kannada

Read More