ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ A-1 ಆರೋಪಿಯಾಗಿರುವ ಪವಿತ್ರಾಗೌಡ ಪರ ವಕೀಲ ಸೆಬಾಸ್ಟಿಯನ್ ಹೈಕೋರ್ಟ್ಗೆ ಬೇಲ್ ಅರ್ಜಿ ಸಲ್ಲಿಸಿದ್ದರು. ಆದರೆ ಚಾರ್ಜ್ಶೀಟ್ ಸಲ್ಲಿಸಿರೋ ಹಿನ್ನೆಲೆ ಇದೀಗ ಪವಿತ್ರಾಗೌಡ ಜಾಮೀನು ಅರ್ಜಿ ವಾಪಸ್ ಪಡೆದಿದ್ದಾರೆ.
ನೀವು ರಿಸ್ಕ್ ತಗೆದುಕೊಳ್ಳಲು ರೆಡಿ ಇದ್ದೀರಾ ಎಂದು ಜಡ್ಜ್ ಪ್ರಶ್ನಿಸಿದ ಕೂಡ್ಲೇ ಪವಿತ್ರಾ ಬೇಲ್ ಅರ್ಜಿ ವಾಪಸ್ ಪಡೀತಿರೋದಾಗಿ ಪರ ವಕೀಲರು ಹೇಳಿದ್ದಾರೆ. ರೇಣುಕಾಸ್ವಾಮಿ ಕೇಸ್ ಸೆಷನ್ ಕೋರ್ಟ್ಗೆ ವರ್ಗಾವಣೆ ಆಗ್ತಿದೆ, ಹೀಗಾಗಿ ಸೆಷನ್ಸ್ ಕೋರ್ಟ್ನಲ್ಲೇ ಬೇಲ್ ಅರ್ಜಿ ಹಾಕಲು ಜಡ್ಜ್ ಸೂಚನೆ ನೀಡಿದ್ದಾರೆ. ಈ ಬೆನ್ನಲ್ಲೇ ಪವಿತ್ರಾ ಪರ ವಕೀಲರು ಅರ್ಜಿ ವಾಪಸ್ ಪಡೆದಿದ್ದಾರೆ.
ಈ ಪ್ರಕರಣ ಸಂಬಂಧ ಚಾರ್ಜ್ ಶೀಟ್ ಸಲ್ಲಿಸೋ ಮುನ್ನ ಪವಿತ್ರಾಗೌಡ ಸೆಷನ್ಸ್ ಕೋರ್ಟ್ಗೆ ಜಾಮೀನು ಅರ್ಜಿ ಹಾಕಿದ್ರು. ಆದರೆ ಸೆಷನ್ಸ್ ಕೋರ್ಟ್ ಜಾಮೀನು ಅರ್ಜಿ ವಜಾಗೊಳಿಸಿತ್ತು. ನಂತರ ಚಾರ್ಜ್ ಶೀಟ್ ಸಲ್ಲಿಕೆಯಾಗ್ತಿದ್ದಂತೆ ಪವಿತ್ರಾ ಮತ್ತೆ ಹೈಕೋರ್ಟ್ಗೆ ಬೇಲ್ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ : ನಾಗಮಂಗಲ ಗಲಭೆಯಲ್ಲಿ ಇನ್ಸ್ಪೆಕ್ಟರ್ ನಿರ್ಲಕ್ಷ್ಯ ಕಾಣುತ್ತಿದೆ – ಸಚಿವ ಡಾ.ಜಿ ಪರಮೇಶ್ವರ್..!