Download Our App

Follow us

Home » ಅಪರಾಧ » ಹೈಕೋರ್ಟ್​ಗೆ ಸಲ್ಲಿಸಿದ್ದ ಜಾಮೀನು ಅರ್ಜಿ ವಾಪಾಸ್ ಪಡೆದ ಪವಿತ್ರಾಗೌಡ..!

ಹೈಕೋರ್ಟ್​ಗೆ ಸಲ್ಲಿಸಿದ್ದ ಜಾಮೀನು ಅರ್ಜಿ ವಾಪಾಸ್ ಪಡೆದ ಪವಿತ್ರಾಗೌಡ..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ A-1 ಆರೋಪಿಯಾಗಿರುವ ಪವಿತ್ರಾಗೌಡ ಪರ ವಕೀಲ ಸೆಬಾಸ್ಟಿಯನ್ ಹೈಕೋರ್ಟ್​ಗೆ ಬೇಲ್​​ ಅರ್ಜಿ ಸಲ್ಲಿಸಿದ್ದರು. ಆದರೆ ಚಾರ್ಜ್​ಶೀಟ್​ ಸಲ್ಲಿಸಿರೋ ಹಿನ್ನೆಲೆ ಇದೀಗ ಪವಿತ್ರಾಗೌಡ ಜಾಮೀನು​ ಅರ್ಜಿ ವಾಪಸ್​ ಪಡೆದಿದ್ದಾರೆ.

ನೀವು ರಿಸ್ಕ್​​ ತಗೆದುಕೊಳ್ಳಲು ರೆಡಿ ಇದ್ದೀರಾ ಎಂದು ಜಡ್ಜ್​ ಪ್ರಶ್ನಿಸಿದ ಕೂಡ್ಲೇ ಪವಿತ್ರಾ ಬೇಲ್​ ಅರ್ಜಿ ವಾಪಸ್ ಪಡೀತಿರೋದಾಗಿ ಪರ ವಕೀಲರು ಹೇಳಿದ್ದಾರೆ. ರೇಣುಕಾಸ್ವಾಮಿ ಕೇಸ್​ ಸೆಷನ್​​ ಕೋರ್ಟ್​ಗೆ ವರ್ಗಾವಣೆ ಆಗ್ತಿದೆ, ಹೀಗಾಗಿ ಸೆಷನ್ಸ್​ ಕೋರ್ಟ್​ನಲ್ಲೇ ಬೇಲ್ ಅರ್ಜಿ ಹಾಕಲು ಜಡ್ಜ್ ಸೂಚನೆ ನೀಡಿದ್ದಾರೆ. ಈ ಬೆನ್ನಲ್ಲೇ ಪವಿತ್ರಾ ಪರ ವಕೀಲರು ಅರ್ಜಿ ವಾಪಸ್ ಪಡೆದಿದ್ದಾರೆ.

ಈ ಪ್ರಕರಣ ಸಂಬಂಧ ಚಾರ್ಜ್ ಶೀಟ್ ಸಲ್ಲಿಸೋ ಮುನ್ನ ಪವಿತ್ರಾಗೌಡ ಸೆಷನ್ಸ್ ಕೋರ್ಟ್​ಗೆ ಜಾಮೀನು ಅರ್ಜಿ ಹಾಕಿದ್ರು. ಆದರೆ ಸೆಷನ್ಸ್ ಕೋರ್ಟ್ ಜಾಮೀನು ಅರ್ಜಿ ವಜಾಗೊಳಿಸಿತ್ತು. ನಂತರ ಚಾರ್ಜ್ ಶೀಟ್ ಸಲ್ಲಿಕೆಯಾಗ್ತಿದ್ದಂತೆ ಪವಿತ್ರಾ ಮತ್ತೆ ಹೈಕೋರ್ಟ್​ಗೆ ಬೇಲ್​ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ : ನಾಗಮಂಗಲ ಗಲಭೆಯಲ್ಲಿ ಇನ್ಸ್​ಪೆಕ್ಟರ್​​​ ನಿರ್ಲಕ್ಷ್ಯ ಕಾಣುತ್ತಿದೆ – ಸಚಿವ ಡಾ.ಜಿ ಪರಮೇಶ್ವರ್..!

Leave a Comment

DG Ad

RELATED LATEST NEWS

Top Headlines

4 ಅಂತಸ್ತಿನ ಕಟ್ಟಡ ಕುಸಿತ – ಕೂದಲೆಳೆ ಅಂತರದಲ್ಲಿ ಪಾರಾದ ತಾಯಿ, ಮಗು..!

ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ತಾಯಿ ಮಗು ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಆಘಾತಕಾರಿ ಘಟನೆಯ ಸಂಪೂರ್ಣ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೀಡಿಯೊದಲ್ಲಿ

Live Cricket

Add Your Heading Text Here