Download Our App

Follow us

Home » ಫ್ಲ್ಯಾಶ್ ನ್ಯೂಸ್ » ಬಿಗ್ ಬಾಸ್ ಮನೆಯಿಂದ ತನಿಷಾ ಔಟ್..? ಏನಿದು ಬಿಗ್ ಬಾಸ್ ಸಿಕ್ರೇಟ್..!

ಬಿಗ್ ಬಾಸ್ ಮನೆಯಿಂದ ತನಿಷಾ ಔಟ್..? ಏನಿದು ಬಿಗ್ ಬಾಸ್ ಸಿಕ್ರೇಟ್..!

ಬಿಗ್ ಬಾಸ್ ಮನೆಯಲ್ಲಿ ಕಳೆದ ವಾರ ಯಾವುದೇ ಎಲಿಮಿನೇಷನ್ ನಡೆದಿರಲಿಲ್ಲ. ಎಲಿಮಿನೇಷನ್ ಆನ್ ಹೋಲ್ಡ್ ಅಂತ ಕಿಚ್ಚ ಸುದೀಪ್ ಕಳೆದ ವಾರ ಹೇಳಿದ್ದರು. ಹೀಗಾಗಿ ಈ ವಾರ ಡಬಲ್ ಎಲಿಮಿನೇಷನ್, ಮುಂದಿನ ವಾರದ ಮಧ್ಯದಲ್ಲಿ ಒಂದು ಎಲಿಮಿನೇಷನ್ ನಡೆಯಬಹುದ ಎಂದು ಎಲ್ಲರೂ ಭಾವಿಸಿದ್ದರು.

ಇದೀಗ ಬಿಗ್ ಬಾಸ್ ಟ್ವಿಸ್ಟ್ ನೀಡಿದ್ದಾರೆ. ಬಿಗ್ ಬಾಸ್‌ ಮನೆಯಿಂದ ಮಿಡ್‌ ವೀಕ್‌ನಲ್ಲಿ ತನಿಷಾ ಕುಪ್ಪಂಡ ಔಟ್‌ ಆಗಿದ್ದಾರೆ ಅಂತ ಹೇಳಲಾಗುತ್ತಿದೆ. ಈ ಮೂಲಕ ಬಿಗ್ ಬಾಸ್ ಮನೆಯಲ್ಲಿ ಈಗ ಉಳಿದುಕೊಂಡಿದ್ದು ಏಳು ಮಂದಿ ಮಾತ್ರ. ಇವರಲ್ಲಿ ಐವರು ಫಿನಾಲೆ ತಲುಪಲಿದ್ದಾರೆ.

ಈ ವಾರ ತನಿಷಾ ಕುಪ್ಪಂಡ, ವರ್ತೂರು ಸಂತೋಷ್, ಕಾರ್ತಿಕ್, ಪ್ರತಾಪ್, ವಿನಯ್, ನಮ್ರತಾ ನಾಮಿನೇಟ್ ಆಗಿದ್ದರು. ಸಂಗೀತಾ ಹಾಗೂ ತುಕಾಲಿ ಸಂತೋಷ್ ನಾಮಿನೇಷನ್​ನಿಂದ ಬಚಾವ್ ಆಗಿದ್ದರು.

ಈ ಪೈಕಿ ತನಿಷಾ ವಾರದ ಮಧ್ಯೆ ಔಟ್ ಆಗಿದ್ದಾರೆ ಅಂತ ಹೇಳಲಾಗುತ್ತಿದೆ. ತನಿಷಾ ಕುಪ್ಪಂಡ ಅವರು ಆರಂಭದಲ್ಲಿ ಸಖತ್ ಫೈಟ್ ನೀಡಿದ್ದರು. ಆ ಬಳಿಕ ಅವರ ಕಾಲಿಗೆ ಏಟಾಯಿತು. ಇದಾದ ಬಳಿಕ ಅವರು ಡಲ್ ಆಗುತ್ತಾ ಬಂದರು. ಇಂದಿನ ಎಪಿಸೋಡ್​ನಲ್ಲಿ ದೊಡ್ಮನೆಯಿಂದ ತನಿಷಾ ಔಟ್ ಆಗಿದ್ದಾರಾ? ಇಲ್ವಾ? ಅನ್ನೊ ಪ್ರಶ್ನೆಗೆ ತೆರೆ ಬೀಳಲಿದೆ.

ಇದನ್ನೂ ಓದಿ : ಇಂದಿನಿಂದ ಲಾಲ್​ಬಾಗ್​ ಫ್ಲವರ್​ ಶೋ ಆರಂಭ..!

 

 

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here