Download Our App

Follow us

Home » ಮೆಟ್ರೋ » ಇಂದಿನಿಂದ ಲಾಲ್​ಬಾಗ್​ ಫ್ಲವರ್​ ಶೋ ಆರಂಭ..!

ಇಂದಿನಿಂದ ಲಾಲ್​ಬಾಗ್​ ಫ್ಲವರ್​ ಶೋ ಆರಂಭ..!

ಬೆಂಗಳೂರು : ಗಣರಾಜ್ಯೋತ್ಸವಕ್ಕೆ ಬೆಂಗಳೂರಿನ ಲಾಲ್ ಬಾಗ್​ನಲ್ಲಿ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ ಭರ್ಜರಿಯಾಗಿ ಸಜ್ಜಾಗಿದೆ. ಇಂದಿನಿಂದ ಜನವರಿ 28ರವರೆಗೆ ಬೆಂಗಳೂರಿನ ಲಾಲ್ ಬಾಗ್ ನಲ್ಲಿ ಫ್ಲವರ್ ಶೋ ನಡೆಯಲಿದೆ.

ಸಿಎಂ ಸಿದ್ದರಾಮಯ್ಯ ಇಂದು ಸಂಜೆ 6 ಗಂಟೆಗೆ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಈ ಬಾರಿ ವಿಶ್ವಗುರು ಬಸವಣ್ಣ, ಗಣರಾಜ್ಯೋತ್ಸವ ಥೀಮ್ ನಲ್ಲಿ ಫ್ಲವರ್ ಶೋ ಆಯೋಜಿಸಲಾಗಿದೆ. ಬಸವಣ್ಣನವರ ಪ್ರತಿಮೆಯ ಜೊತೆಗೆ ಅನುಭವ ಮಂಟಪ ಕೂಡ ಗಮನಸೆಳೆಯಲಿದೆ.

ಫ್ಲವರ್ ಶೋಗೆ ಬೇಕಾದ ಎಲ್ಲಾ ಸಿದ್ದತೆಯಾಗಿದೆ. ಒಟ್ಟು 68 ಬಗೆಯ ಹೂಗಳು,22 ವರ್ಣ ರಂಜಿತ ಹೂಗಳು ಇರಲಿವೆ. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 35 ಲಕ್ಷ ಹೂಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ‌.

ಫ್ಲವರ್ ಶೋ ಟಿಕೆಟ್​ ದರ :

ಫಲಪುಷ್ಪ ಪ್ರದರ್ಶನ ನೋಡಲು ಬರುವ ವಯಸ್ಕರಿಗೆ 80 ರೂಪಾಯಿ ಟಿಕೆಟ್ ದರ. ರಜೆ ದಿನಗಳಲ್ಲಿ ವಯಸ್ಕರಿಗೆ 100 ರೂಪಾಯಿ ಟಿಕೆಟ್ ದರ ಇರುತ್ತದೆ. ಮಕ್ಕಳಿಗೆ 30 ರೂ. ಶಾಲಾ ಸಮವಸ್ತ್ರ ಧರಿಸಿಕೊಂಡು ಬರುವ ಮಕ್ಕಳಿಗೆ ಉಚಿತ ಪ್ರವೇಶವಿರುತ್ತದೆ. ಈ ಬಾರಿ 10 ಕ್ಕೂ ಹೆಚ್ಚು ಜನರು ಬರುವ ಸಾಧ್ಯತೆ ಇದೆ.

ಇದನ್ನೂ ಓದಿ : ಬಿಗ್‌ಬಾಸ್‌ ಸ್ಪರ್ಧಿ ಡ್ರೋನ್‌ ಪ್ರತಾಪ್‌ ವಿರುದ್ಧ 2.50 ಕೋಟಿ ರೂ. ಮಾನನಷ್ಟ ಕೇಸ್‌..!

Leave a Comment

DG Ad

RELATED LATEST NEWS

Top Headlines

ಕೈಲಾಸ್​ ಸಂಗೀತ್ ಟ್ರಸ್ಟ್​​​ ನೇತೃತ್ವದಲ್ಲಿ ಮೇರು ಸಂಗೀತಗಾರ ಆಚಾರ್ಯ ಪಂಡಿತ್ ಬೀಮಲೇಂದು ಮುಖರ್ಜಿ ಶತಮಾನೋತ್ಸವ..!

ಬೆಂಗಳೂರು : ಮೇರು ಸಂಗೀತಗಾರ ಆಚಾರ್ಯ ಪಂಡಿತ್ ಬೀಮಲೇಂದು ಮುಖರ್ಜಿ ಅವರ ಶತಮಾನೋತ್ಸವ ಅಂಗವಾಗಿ ಶಾಸ್ತ್ರೀಯ ಸಂಗೀತ ಸಂಜೆ ನೆರವೇರಿತು. ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್​ನಲ್ಲಿ ಏರ್ಪಡಿಸಿದ್ದ

Live Cricket

Add Your Heading Text Here