ಜೈಲಿನಲ್ಲಿ ನಟ ದರ್ಶನ್ ಲೈಫ್ ಸ್ಟೈಲ್ ಹೇಗಿದೆ? – ಕಾರಗೃಹದಿಂದ ಸುಪ್ರೀಂ ಕೋರ್ಟ್‌ಗೆ ಕಂಪ್ಲೀಟ್ ವರದಿ!

ಬೆಂಗಳೂರು : ಸುಪ್ರೀಂ ಕೋರ್ಟ್‌ನಲ್ಲೂ ನಟ ದರ್ಶನ್​ಗೆ ಜಾಮೀನು ಸಿಗದೆ ಇನ್ನೂ ಒಂದು ವರ್ಷ ಜೈಲುವಾಸವೇ ಗತಿಯಾಗಿದೆ. ಇದೀಗ ಜೈಲಿನಲ್ಲಿ ದರ್ಶನ್‌ಗೆ ಸಿಗುತ್ತಿರುವ ಸೌಲಭ್ಯ, ಬ್ಯಾರಕ್​ನಲ್ಲಿ ಭದ್ರತೆಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಕಾರಾಗೃಹ ಇಲಾಖೆ ಸುಪ್ರೀಂ ಕೋರ್ಟ್‌ಗೆ ನೀಡಿದೆ.

ಕಾರಾಗೃಹ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ದರ್ಶನ್ ಜೈಲು ಸೇರಿದ ಬಳಿಕ ಕುಟುಂಬಸ್ಥರು 70 ಬಾರಿ ಭೇಟಿಯಾಗಿದ್ದಾರೆ. ಹಾಗೂ 73 ಬಾರಿ ಪೋನ್ ಕರೆಗಳ ಸೌಲಭ್ಯ ಪಡೆದಿದ್ದಾರೆ. ಆಗಸ್ಟ್ 2025 ರಿಂದ 2026 ಮೇ ವರೆಗೆ ಕುಟುಂಬದವರ ಭೇಟಿಗೆ ಅವಕಾಶ ಸಿಕ್ಕಿತ್ತು. ಇನ್ನು 2025 ಆಗಸ್ಟ್‌ ನಿಂದ 28 ಬಾರಿ ವಕೀಲರ ಭೇಟಿಗೆ ಅವಕಾಶ ನೀಡಲಾಗಿತ್ತು.

ಬ್ಯಾರಕ್‌ನಲ್ಲಿ ಏನೆಲ್ಲಾ ಸೌಲಭ್ಯಗಳಿವೆ?

ದರ್ಶನ್ ಇರುವ ಬ್ಯಾರಕ್​ನಲ್ಲಿ ಕಾರ್ಪೆಟ್, ಕಂಬಳಿ, ಬೆಡ್ ಶೀಟ್, ಸ್ಟೇನ್‌ಲೆಸ್ ಸ್ಟೀಲ್ ತಟ್ಟೆ, ಕಪ್, ಬೌಲ್ ಮತ್ತು ಗ್ಲಾಸ್ ನೀಡಲಾಗಿದೆ. ಕೋರ್ಟ್ ಆದೇಶದಂತೆ ಚಾದರ್ ಹಾಗೂ ಕಂಬಳಿಯ ವ್ಯವಸ್ಥೆ ಮಾಡಿಕೊಡಲಾಗಿದೆ. ಬ್ಯಾರಕ್‌ನಲ್ಲಿ ಸಾಕಷ್ಟು ಗಾಳಿ-ಬೆಳಕು ಇದೆ. ವಿಶಾಲವಾದ ಕೊಠಡಿಯಲ್ಲಿ ಸೀಲಿಂಗ್ ಫ್ಯಾನ್‌ಗಳಿದ್ದು, ಕಿಟಕಿ ಮತ್ತು ಬಾಗಿಲುಗಳಿಗೆ ಸೊಳ್ಳೆ ಪರದೆಗಳನ್ನು ಅಳವಡಿಸಲಾಗಿದೆ. ಇನ್ನು ದರ್ಶನ್ ಇರುವ ಬ್ಯಾರಕ್‌ನಲ್ಲಿ ಭಾರತೀಯ ಮತ್ತು ವೆಸ್ಟರ್ನ್ ಶೌಚಾಲಯದ ಸೌಲಭ್ಯವಿದೆ.

ಬ್ಯಾರಕ್ ಸುತ್ತ 24/7 ಹದ್ದಿನ ಕಣ್ಣು:

ದರ್ಶನ್ ಇರುವ ಬ್ಯಾರಕ್‌ನಲ್ಲಿ ಸುರಕ್ಷತೆಯ ದೃಷ್ಟಿಯಿಂದ 24/7 ಕಟ್ಟುನಿಟ್ಟಿನ ಭದ್ರತೆಯನ್ನು ನಿಯೋಜಿಸಲಾಗಿದೆ. ಇತರ ಖೈದಿಗಳಿಂದ ಯಾವುದೇ ತೊಂದರೆಯಾಗದಂತೆ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಕಾವಲಿದೆ.

•ಹಗಲು ವೇಳೆ ಒಬ್ಬ ಸಹಾಯಕ ಜೈಲರ್ ಹಾಗೂ ಒಬ್ಬ ವಾರ್ಡರ್

•ರಾತ್ರಿ ವೇಳೆ ಇಬ್ಬರು ಹೆಡ್ ವಾರ್ಡರ್ ಗಳ ನಿಯೋಜನೆ

•ಇತರ ಖೈದಿಗಳು ಕಾರಿಡಾರ್​ಗೆ ಬರದಂತೆ ಭದ್ರತೆ ಹಾಗೂ ಮುನ್ನೆಚ್ಚರಿಕೆ ಕ್ರಮ

•ಬ್ಯಾರಕ್ ಮುಂಭಾಗದ ಕಾರಿಡಾರ್​ನಲ್ಲಿ ಸಿಸಿಟಿವಿಗಳ ಅಳವಡಿಕೆ

•ಕಮಾಂಡ್ ಸೆಂಟರ್​ನಲ್ಲಿ ಸಿಸಿಟಿವಿಗಳ ಪರಿಶೀಲನೆ

•ಜೈಲಿನ ನಿಯಾಮವಳಿ ಪ್ರಕಾರ ಟೆಲಿಫೋನ್ ಸೌಲಭ್ಯ ಹಾಗೂ ಸಂದರ್ಶನಕ್ಕೆ ಅವಕಾಶ

ನಟ ದರ್ಶನ್ ಆರೋಗ್ಯ ಕಾಪಾಡಲು ವ್ಯವಸ್ಥೆ :

•ಫಿಸಿಯೋಥೆರಪಿಸ್ಟ್ ಸಲಹೆ ಮೇರೆಗೆ ಕುರ್ಚಿ ವ್ಯವಸ್ಥೆ

•ಜೈಲಿನ ವೈದ್ಯರ ಸಲಹೆಯಂತೆ ಮೊಟ್ಟೆ, ಬ್ರೆಡ್ ಮತ್ತು ಹಾಲಿನಂತಹ ಹೆಚ್ಚುವರಿ ಆಹಾರ ವ್ಯವಸ್ಥೆ

•ಸಂದರ್ಶನ ಸಮಯದಲ್ಲಿ ತರುವ ಹಣ್ಣುಗಳು, ಡ್ರೈ ಫ್ರೂಟ್ಸ್, ಬೇಕರಿ ಮತ್ತು ಸಿಹಿತಿಂಡಿ ಪದಾರ್ಥಗಳು, ಬಟ್ಟೆ ಮತ್ತು ಹಾಸಿಗೆ ಸಾಮಗ್ರಿ

•ಕೋರ್ಟ್ ಸೂಚನೆ ಮೇರೆಗೆ ಟಿವಿ ಸೌಲಭ್ಯ..

•ಕ್ಯಾರಂ, ದಿನಪತ್ರಿಕೆ, ಮಾಸಿಕ ಪತ್ರಿಕೆಗಳು ಮತ್ತು ಪುಸ್ತಕಗಳ ಸೌಲಭ್ಯ

•ಸ್ನಾನದ ಸೋಪು, ಬಟ್ಟೆ ತೊಳೆಯುವ ಸೋಪು, ತೆಂಗಿನ ಎಣ್ಣೆ, ಟೂತ್ ಪೇಸ್ಟ್, ಫಿನೈಲ್ ಮತ್ತು ಬ್ಲೀಚಿಂಗ್ ಪೌಡರ್

ಫಿಟ್ನೆಸ್ ಕಾಪಾಡಲು ವ್ಯವಸ್ಥೆ :

•ಸೂರ್ಯನ ಬೆಳಕಿನಲ್ಲಿ ವಾಕಿಂಗ್​ಗೆ ಅವಕಾಶ

•ಬೆಳಿಗ್ಗೆ 7.30 ರಿಂದ 8.30 ರವರೆಗೆ ಯೋಗಾಭ್ಯಾಸ

•ಕಾರಿಡಾರ್‌ನಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ ಮತ್ತು ಸಂಜೆ 3 ಗಂಟೆಯಿಂದ 6 ರವರೆಗೆ ವಾಕಿಂಗ್​ಗೆ ಅನುಮತಿ

•ಕರ್ನಾಟಕ ಬಂದೀಖಾನೆ ಸೇವೆಗಳ ಅನುಗುಣವಾಗಿ ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲಾ ಸೌಲಭ್ಯಗಳ ವ್ಯವಸ್ಥೆ

•ದರ್ಶನ್​ಗೆ ನೀಡಲಾದ ಎಲ್ಲಾ ಸೌಲಭ್ಯಗಳ ಕುರಿತು ವರದಿಯಲ್ಲಿ ಉಲ್ಲೇಖ

•ದರ್ಶನ್ ಜಾಮೀನು ಸಂಬಂಧ ಸುಪ್ರೀಂಕೋರ್ಟ್​ಗೆ ವರದಿ ನೀಡಿದ್ದ ಕಾರಾಗೃಹ ಇಲಾಖೆ

ಇದನ್ನೂ ಓದಿ : ಪ್ರಧಾನಿ ಮೋದಿಗೆ ಚೋಳರ ಕಾಲದ ತಾಮ್ರ ಫಲಕ ಹಿಂದಿರುಗಿಸಿದ ನೆದರ್ಲೆಂಡ್ಸ್‌!

Btv Kannada
Author: Btv Kannada

Leave a Comment

Read More