ಬೆಂಗಳೂರು : ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನಲೆ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಮೃತಹಳ್ಳಿ ಬಳಿಯ ಜಕ್ಕೂರಿನಲ್ಲಿ ನಡೆದಿದೆ. ರಾಮ್ ಕುಮಾರ್ (25) ಆತ್ಮಹತ್ಯೆ ಮಾಡಿಕೊಂಡ ಯುವಕ.
ರಾಮ್ ಕುಮಾರ್ ಅನ್ಯಜಾತಿ ಯುವತಿಯನ್ನ ಪ್ರೀತಿಸುತ್ತಿದ್ದ. ಮನೆಯಲ್ಲಿ ಮದುವೆ ವಿಚಾರ ಪ್ರಸ್ತಾಪ ಮಾಡಿದಾಗ ಯುವಕನ ಕುಟುಂಬ ಮದುವೆಗೆ ನಿರಾಕರಿಸಿದೆ. ಇದರಿಂದ ಮನನೊಂದು ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಮೃತಹಳ್ಳಿ ಪೊಲೀಸರಿಂದ ತನಿಖೆ ಮುಂದುವರೆದಿದೆ.
ಇದನ್ನೂ ಓದಿ : ಇಂದಿನಿಂದ ದೇಶಾದ್ಯಂತ ಅಮುಲ್ ಹಾಲಿನ ದರ ಲೀಟರ್ಗೆ 2 ರೂ. ಹೆಚ್ಚಳ!
Author: Btv Kannada
Post Views: 503









