ನವದೆಹಲಿ : ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಸಾಮಾನ್ಯ ಜನರಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಪ್ರಮುಖ ಡೈರಿ ಬ್ರಾಂಡ್ ಅಮುಲ್ ತನ್ನ ಹಲವಾರು ಹಾಲಿನ ಉತ್ಪನ್ನಗಳಲ್ಲಿ ಪ್ರತಿ ಲೀಟರ್‌ಗೆ 2 ರೂ.ಗಳಷ್ಟು ಹೆಚ್ಚಳವನ್ನು ಘೋಷಿಸಿದೆ. ಇಂದಿನಿಂದಲೇ ದೇಶಾದ್ಯಂತ ಲೀಟರ್‌ಗೆ 2 ರೂ. ಹೆಚ್ಚಳದ ನಿಯಮ ಜಾರಿಗೆ ಬಂದಿದೆ.
ಹಾಲು ಉತ್ಪಾದನೆಗೆ ಬೇಕಾಗುವ ಮೇವಿನ ಬೆಲೆಗಳು ಕಳೆದ ಕೆಲವು ತಿಂಗಳಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಜೊತೆಗೆ ಪಶು ಆಹಾರ, ವಿಶೇಷವಾಗಿ ಹಸು-ಮೇವು, ತೈಲದ ಬೆಲೆ, ಹಾಲು ಪ್ಯಾಕೇಜ್ ಮಾಡಲು ಬಳಸುವ ಫಿಲ್ಮ್ ಮತ್ತು ಇಂಧನದ ವೆಚ್ಚವೂ ಹೆಚ್ಚಾಗಿದೆ. ಹೀಗಾಗಿ ಹಾಲಿನ ಬೆಲೆಯೂ ಏರಿಕೆಯಾಗಿದೆ.
ನಂದಿನಿ ಹಾಲಿನ ದರ ಹೆಚ್ಚು ಅಂತ ಅಮುಲ್ ಹಾಲು ಖರೀದಿಸುವವರಿಗೂ ಈಗ ಕಷ್ಟವಾಗಿದೆ. ಅಮುಲ್ ಸ್ಟ್ಯಾಂಡರ್ಡ್, ಅಮುಲ್ ಬಫೆಲೋ, ಅಮುಲ್ ಗೋಲ್ಡ್, ಅಮುಲ್ ಸ್ಲಿಮ್ ಎನ್ಟ್ರಿಮ್, ಅಮುಲ್ ಚಾಯ್‌ಮಜಾ, ಅಮುಲ್ ತಾಜಾ ಮತ್ತು ಅಮುಲ್ ಕೌ ಮಿಲ್ಕ್ಗಳ ಬೆಲೆ ಏರಿಕೆ ಆಗಿದೆ.
ಹೊಸ ಬೆಲೆಪಟ್ಟಿ ಪ್ರಕಾರ, ಅಮುಲ್ ಗೋಲ್ಡ್ (ಫುಲ್ ಕ್ರೀಮ್) ಹಾಲು ಈಗ 500 ಮಿಲಿ ಪ್ಯಾಕ್‌ಗೆ ₹35 ಮತ್ತು 1 ಲೀಟರ್‌ಗೆ ₹69 ಕ್ಕೆ ಲಭ್ಯ ಇರಲಿದೆ. ಅಮುಲ್ ತಾಜಾ (ಟೋನ್ಡ್) ಹಾಲು 500 ಮಿಲಿ ಪ್ಯಾಕ್‌ಗೆ ₹30 ಮತ್ತು 1 ಲೀಟರ್‌ಗೆ ₹57 ಆಗಿದೆ. ಅಮುಲ್ ಹಸುವಿನ ಹಾಲಿನ 500 ಮಿಲಿ ಪ್ಯಾಕ್ ₹31 ಆಗಿದ್ದು, ಅಮುಲ್ ಬಫಲೋ ಹಾಲು 500 ಮಿಲಿಗೆ ₹38 ಮತ್ತು 1 ಲೀಟರ್‌ಗೆ ₹75 ಕ್ಕೆ ಲಭ್ಯವಿರುತ್ತದೆ. ಈ ಹೆಚ್ಚಳ ಮುಖ್ಯವಾಗಿ ತಾಜಾ ಹಾಲಿನ ಪ್ರಮುಖ ಪ್ಯಾಕೇಜ್‌ಗಳಿಗೆ ಅನ್ವಯವಾಗುತ್ತದೆ. ಸರ್ಕಾರಿ ಸಂಸ್ಥೆಯಾದ ಜಿಸಿಎಂಎಂಎಫ್ (GCMMF) ಪ್ರಕಾರ, ಈ ಬಾರಿ ಪ್ರತಿ ಲೀಟರ್‌ಗೆ ಸುಮಾರು ಶೇ. 2.5 ರಿಂದ 3.5ರಷ್ಟು ಬೆಲೆ ಏರಿಕೆ ಆಗಿದೆ.
ಇದನ್ನೂ ಓದಿ : ಉತ್ತರ ಪ್ರದೇಶದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ – 74 ಮಂದಿ ಸಾವು!









