ಬೆಂಗಳೂರು : ಕನ್ನಡದ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಬ್ಲ್ಕ್ಯಾಕ್‌ಮೇಲ್ ಮಾಡಿದ್ದ ಕೇಸ್‌ಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪತಿ ಕಾರ್ತಿಕ್ ಸುಳ್ಳು ದೂರು ನೀಡಿದ್ದಾನೆ ಎಂದು ಸ್ವತಃ ಆತನ ಪತ್ನಿ ಹರ್ಷಿತಾ ಅವರೇ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರಿಗೆ ಪತ್ರ ಬರೆದು ಗಂಡನ ಕಾಮಪುರಾಣವನ್ನು ಬಿಚ್ಚಿಟ್ಟಿದ್ದಾರೆ.
ಮೇಕಪ್ ಕ್ಲಿನಿಕ್ ಮಾಲೀಕ ಕಾರ್ತಿಕ್ ಎಂಬುವವರು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸಾಧನಾ ಶೆಟ್ಟಿ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿತ್ತು. ಇದೀಗ ಈ ಸಂಬಂಧ ಪತಿ ಕಾರ್ತಿಕ್ ವಿರುದ್ಧ ಪತ್ನಿ ಹರ್ಷಿತಾ ಹೈದರಾಬಾದ್, ಬೆಂಗಳೂರು ಡಿಜಿಗೆ ಪತ್ರ ಬರೆದು ಸುಳ್ಳು ಕಥೆಯ ಬಗ್ಗೆ ತಿಳಿಸಿದ್ದಾರೆ.
ತನ್ನ ತಪ್ಪನ್ನು ಮುಚ್ಚಿಟ್ಟುಕೊಳ್ಳಲು ಸಾಧನಾ ಮೇಲೆ ಕಾರ್ತಿಕ್ ದೂರು ನೀಡಿದ್ದ. ಸಾಧನಾ ಶೆಟ್ಟಿ ಯಾವತ್ತೂ ಹಣಕ್ಕಾಗಿ ಬೇಡಿಕೆ ಇಟ್ಟಿಲ್ಲ. ನನ್ನ ಪತಿಯೇ ತನ್ನ ಲೈಂಗಿಕ ಅಕ್ರಮಗಳನ್ನು ಮುಚ್ಚಿಹಾಕಲು ಆಕೆಯನ್ನು ಬ್ಲ್ಯಾಕ್‌ಮೇಲರ್ ಎಂದು ಕಥೆ ಹೇಳಿದ್ದಾನೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಕಾರ್ತಿಕ್ ಒಬ್ಬ ದೊಡ್ಡ ಉದ್ಯಮಿಯೇನಲ್ಲ, ಆತ ಕೇವಲ ತನ್ನ ಕ್ಲಿನಿಕ್‌ನ ಮಾರ್ಕೆಟಿಂಗ್ ನೋಡಿಕೊಳ್ಳುತ್ತಿದ್ದ ಕೆಲಸಗಾರ ಅಷ್ಟೇ ಎಂದು ಹರ್ಷಿತಾ ಸತ್ಯ ಬಿಚ್ಚಿಟ್ಟಿದ್ದಾರೆ.
ಸಾಧನಾ ಶೆಟ್ಟಿಯನ್ನು ಮದುವೆಯಾಗುವುದಾಗಿ ನಂಬಿಸಿ ಕಾರ್ತಿಕ್ ಹೈದರಾಬಾದ್, ಬೆಂಗಳೂರು ಮತ್ತು ಮಾಲ್ಡೀವ್ಸ್‌ಗೆ ಕರೆದೊಯ್ದಿದ್ದ. ಆಕೆಗಾಗಿ ಹೈದರಾಬಾದ್ನಲ್ಲಿ ಪಿಜಿ ವ್ಯವಸ್ಥೆಯನ್ನೂ ಮಾಡಿದ್ದ. ಆದರೆ ಆತನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ನಂತರ 2025ರ ಆಗಸ್ಟ್ 8ರಂದು ಕಾರ್ತಿಕ್ ನಿವಾಸಕ್ಕೆ ಆಗಮಿಸಿದ್ದ ಇನ್ಪುಯೆನ್ಸರ್ ಸಾಧನಾ, ಆತ ನನಗೆ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದಾನೆಂದು ಕುಟುಂಬಸ್ಥರ ಮುಂದೆ ಆರೋಪಿಸಿದ್ದಳು. ಈ ವೇಳೆ ನಮ್ಮ ಬಳಿ ಹಣವಿದೆ ಎಂದು ಅವಳು ಸುಳ್ಳು ಆರೋಪ ಮಾಡುತ್ತಿದ್ದಾಳೆ ಎಂದು ಕಾರ್ತಿಕ್ ತನ್ನ ಪತ್ನಿಯನ್ನು ನಂಬಿಸಿದ್ದ.
ಆದರೆ ಸಾಧನಾ ಕಳುಹಿಸಿದ ಸಾಕ್ಷ್ಯಗಳನ್ನು ನೋಡಿದ ಬಳಿಕ ಹರ್ಷಿತಾ ಶಾಕ್ ಆಗಿದ್ದರು. ಕಾರ್ತಿಕ್ ಕೇವಲ ಸಾಧನಾ ಮಾತ್ರವಲ್ಲದೆ ಇನ್ನೂ ಹಲವು ಯುವತಿಯರಿಗೆ ಇದೇ ರೀತಿ ವಂಚಿಸಿರುವುದು ಅವರಿಗೆ ಯುವತಿಯಿಂದ ತಿಳಿದುಬಂತು. ನಂತರ 2 ತಿಂಗಳಿಂದ ಪತಿಯಿಂದ ದೂರವಿದ್ದ ಆಕೆ, ಪ್ರಕರಣ ಸಂಬಂಧ ಮಾಹಿತಿ ಕೇಳಿದ ಪೊಲೀಸರ ಮುಂದೆ ಪತಿಯ ಅಸಲಿ ಮುಖ ಬಿಚ್ಚಿಟ್ಟಿದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಜಯನಗರ ಪೊಲೀಸರು, ಕರ್ನಾಟಕ ಮತ್ತು ತೆಲಂಗಾಣ ಡಿಐಜಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಹರ್ಷಿತಾ ರವಾನಿಸಿದ್ದಾರೆ.
ಇದನ್ನೂ ಓದಿ : ತೀವ್ರ ವಿರೋಧದ ಬೆನ್ನಲ್ಲೇ ಜ್ಯೋತಿಷಿ ನೇಮಕಾತಿ ಆದೇಶ ರದ್ದುಗೊಳಿಸಿದ ಸಿಎಂ ವಿಜಯ್!









