ವಂದೇ ಭಾರತ್ ರೈಲಿನಲ್ಲಿ 700 ರೂ. ಟಿಕೆಟ್ 380ಕ್ಕೆ ಡೀಲ್ – ಟಿಟಿಇ ಅಮಾನತು!

ನವದೆಹಲಿ : ವಂದೇ ಭಾರತ್ ಎಕ್ಸ್​ಪ್ರೆಸ್​ನಲ್ಲಿ ಅಧಿಕೃತ ದರಕ್ಕಿಂತ ಕಡಿಮೆ ದರಕ್ಕೆ ಟಿಕೆಟ್ ವ್ಯವಸ್ಥೆ ಮಾಡಿಕೊಟ್ಟ ಆರೋಪದ ಮೇಲೆ ಟಿಕೆಟ್ ಪರೀಕ್ಷರೊಬ್ಬರನ್ನು (TTE) ರೈಲ್ವೆ ಇಲಾಖೆ ಅಮಾನತುಗೊಳಿಸಿದೆ. ರೈಲ್ವೆ ಟಿಟಿಇ ಮತ್ತು ಪ್ರಯಾಣಿಕರ ನಡುವಿನ ಸಂಭಾಷಣೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೈರಲ್ ವಿಡಿಯೋದಲ್ಲಿ ರೈಲು ಕೋಚ್‌ನೊಳಗೆ ಪ್ರಯಾಣಿಕರೊಂದಿಗೆ ಮಾತನಾಡುತ್ತಿದ್ದ ಟಿಟಿಇ, ಅಧಿಕೃತವಾಗಿ 700 ರೂ. ದರ ಇರುವ ಟಿಕೆಟ್‌ಗೆ ಕೇವಲ 380 ರೂ. ನೀಡಿದರೆ ಸೀಟು ವ್ಯವಸ್ಥೆ ಮಾಡಿಕೊಡುವುದಾಗಿ ಹೇಳುತ್ತಿರುವುದು ಕೇಳಿಬಂದಿದೆ. ಈ ವೇಳೆ ಸಹ ಪ್ರಯಾಣಿಕರು ಪ್ರಶ್ನೆ ಮಾಡಿದಾಗ, ಅವರು ಅದನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿರುವುದಾಗಿ ಆರೋಪಿಸಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿದಾಡುತ್ತಿದ್ದಂತೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ರೈಲ್ವೆ ಸೇವಾ ವಿಭಾಗ ಮತ್ತು ದಾನಾಪುರ ವಿಭಾಗದ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಂಬಂಧಿತ ಟಿಟಿಇಯನ್ನು ತಕ್ಷಣ ಅಮಾನತುಗೊಳಿಸಿದ್ದಾರೆ.

ಇದನ್ನೂ ಓದಿ : ಮತ್ತಷ್ಟು ದುಬಾರಿಯಾಗಲಿದೆ ಚಿನ್ನ, ಬೆಳ್ಳಿ – ಆಮದು ಸುಂಕ ಶೇ.15ಕ್ಕೆ ಹೆಚ್ಚಿಸಿದ ಕೇಂದ್ರ ಸರ್ಕಾರ!

Btv Kannada
Author: Btv Kannada

Leave a Comment

Read More