ಮತ್ತಷ್ಟು ದುಬಾರಿಯಾಗಲಿದೆ ಚಿನ್ನ, ಬೆಳ್ಳಿ – ಆಮದು ಸುಂಕ ಶೇ.15ಕ್ಕೆ ಹೆಚ್ಚಿಸಿದ ಕೇಂದ್ರ ಸರ್ಕಾರ!

ನವದೆಹಲಿ : ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಮತ್ತಷ್ಟು ದುಬಾರಿಯಾಗಲಿವೆ. ದೇಶದ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ರಕ್ಷಿಸಲು ಮತ್ತು ರೂಪಾಯಿ ಮೌಲ್ಯದ ಕುಸಿತವನ್ನು ತಡೆಯಲು ಕೇಂದ್ರ ಸರ್ಕಾರವು ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಶೇ. 15ಕ್ಕೆ ಏರಿಕೆ ಮಾಡಿದೆ.

ಈ ಹಿಂದೆ ಮೂಲ ಕಸ್ಟಮ್ಸ್ ಸುಂಕ (BCD) ಶೇ. 5ರಷ್ಟಿತ್ತು. ಈಗ ಇದನ್ನು ಶೇ. 10ಕ್ಕೆ ಏರಿಕೆ ಮಾಡಲಾಗಿದೆ. ಸೆಸ್‌ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ ಮೂಲ ಕಸ್ಟಮ್ಸ್‌ ಸುಂಕ ಶೇ. 5ರಷ್ಟು ಏರಿಕೆ ಮಾಡಿದ್ದರಿಂದ ಒಟ್ಟು ಆಮದು ಸುಂಕ ಶೇ.15ಕ್ಕೆ ಏರಿಕೆಯಾಗಿದೆ.

ಆಮದು ಸುಂಕ ಹೆಚ್ಚಾದ ಬೆನ್ನಲ್ಲೇ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ತಕ್ಷಣವೇ ದುಬಾರಿಯಾಗಲಿವೆ. ಮುಂಬರುವ ಹಬ್ಬ ಹಾಗೂ ಮದುವೆ ಸೀಸನ್‌ಗಳಲ್ಲಿ ಆಭರಣ ಖರೀದಿಸುವ ಗ್ರಾಹಕರಿಗೆ ಮೇಕಿಂಗ್ ಚಾರ್ಜ್ ಹಾಗೂ ಜಿಎಸ್‌ಟಿ ಜೊತೆಗೆ ಈ ಹೆಚ್ಚುವರಿ ಸುಂಕದ ಹೊರೆಯೂ ತಟ್ಟಲಿದೆ.

ಆಮದಾಗುವ ಚಿನ್ನದ ಮೇಲೆ ಶೇ. 15 ತೆರಿಗೆ ವಿಧಿಸಲಾಗಿದೆ. ಇದರ ಜೊತೆ ಚಿನ್ನದ ಮೌಲ್ಯದ ಮೇಲೆ ಶೇ. 3 ಜಿಎಸ್‌ಟಿ ಮೊದಲದೇ ವಿಧಿಸಲಾಗಿದೆ. ಹೀಗಾಗಿ ಚಿನ್ನದ ದರ ಮತ್ತಷ್ಟು ಏರಿಕೆಯಾಗಲಿದೆ.

ಇದನ್ನೂ ಓದಿ : CBI ನಿರ್ದೇಶಕರ ಆಯ್ಕೆ ಪಾರದರ್ಶಕವಾಗಿಲ್ಲ – ಆಯ್ಕೆ ಸಮಿತಿ ನಿರ್ಣಯದ ಬಗ್ಗೆ ರಾಹುಲ್ ಗಾಂಧಿ ಅಸಮಾಧಾನ!

Btv Kannada
Author: Btv Kannada

Leave a Comment

Read More