ಬೆಂಗಳೂರು : ಜೆಟ್ ಲ್ಯಾಗ್ ಪಬ್ ಲೈಸೆನ್ಸ್ 25 ದಿನ ಸಸ್ಪೆಂಡ್ ಆಗಿದೆ. ಲೈಸೆನ್ಸ್ ರದ್ದುಗೊಳಿಸುವ ಮೊದಲ ಹಂತ ಜಾರಿಯಾಗಿದ್ದು, ರಾಜಾಜಿನಗರದ ಜೆಟ್ಲ್ಯಾಗ್ ಪಬ್ ಲೈಸೆನ್ಸ್ನ್ನು ಅಮಾನತು ಮಾಡಿದ್ದಾರೆ.
CL- 9 ಪಡೆದ ಸನ್ನದ್ದುದಾರರಿಂದ ನಿಯಮ ಉಲ್ಲಂಘನೆಯಾಗಿದ್ದು, ರಾತ್ರಿ 1 ಗಂಟೆ ಬಳಿಕವೂ ಪಬ್ ಓನರ್ ಸೆಲೆಬ್ರೆಟಿಗಳಿಗೆ ಪಾರ್ಟಿಗೆ ಅವಕಾಶ ಕೊಟ್ಟಿದ್ದರು. ಈ ಬಗ್ಗೆ ಅಬಕಾರಿ ಇಲಾಖೆ ಜೆಟ್ಲ್ಯಾಗ್ ಪಬ್ಗೆ ನೋಟಿಸ್ ನೀಡಿದ್ದರು. ನಿರ್ಮಾಪಕ ಸೌಂದರ್ಯ ಜಗದೀಶ್ ಮಾಲೀಕತ್ವದ ಜೆಟ್ ಲ್ಯಾಗ್ ಮಿಡ್ ನೈಟ್ ಪಾರ್ಟಿಗಳಿಗೆ ಕುಖ್ಯಾತಿ ಆಗಿತ್ತು.
ಜನವರಿ 3 ರಂದು ಜೆಟ್ ಲ್ಯಾಗ್ ಪಬ್ ನಲ್ಲಿ ಸೆಲೆಬ್ರಿಟಿಗಳು ಅವಧಿ ಮೀರಿ ಪಾರ್ಟಿ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ, ಕೆಪಿ( ಕರ್ನಾಟಕ ಪೊಲೀಸ್ ) ಕಾಯ್ದೆ ಅಡಿಯಲ್ಲಿ ಮತ್ತು ಅಬಕಾರಿ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಈ ಬಗ್ಗೆ ಸ್ಥಳೀಯರು ಠಾಣೆಗೆ ಸಾಲು ಸಾಲು ದೂರು ನೀಡಿದ್ದರು. ಇದೀಗ ಲೇಟ್ ನೈಟ್ ಪಾರ್ಟಿ ಕೇಸ್ನಲ್ಲಿ ಪಬ್ ಲೈಸೆನ್ಸ್ ರದ್ದಾಗಿದೆ.
ಇದನ್ನೂ ಓದಿ : ದಾವಣಗೆರೆ : ಸಾಲ ಬಾಧೆಯಿಂದಾಗಿ ವಿಷ ಸೇವಿಸಿ ರೈತ ಆ*ತ್ಮಹ*ತ್ಯೆ..!