ದಾವಣಗೆರೆ : ಸಾಲ ಬಾಧೆಯಿಂದಾಗಿ ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ನಡೆದಿದೆ.
52 ವರ್ಷದ ಕರೆಕಾಳವ್ವರ ಸಿದ್ದಪ್ಪ ಆತ್ಮಹತ್ಯೆಗೆ ಶರಣಾದ ರೈತನಾಗಿದ್ದಾನೆ. ರೈತ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್ಗಳಲ್ಲಿ 12 ಲಕ್ಷಕ್ಕೂ ಹೆಚ್ಚು ಸಾಲಮಾಡಿದ್ದ. ಹಾಗಾಗಿ ಸಾಲದ ಬಾಧೆಯಿಂದ ಕಳೆದ ಭಾನುವಾರ ರೈತ ವಿಷ ಸೇವಿಸಿದ್ದ. ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ರೈತ ಇಂದು ಸಾವನ್ನಪ್ಪಿದ್ದಾನೆ.
ಕೈಕೊಟ್ಟ ಮಳೆ, ಸಾಲಗಾರರ ಕಾಟಕ್ಕೆ ಬೇಸತ್ತು ರೈತ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿದ್ದು, ರೈತ ಸಿದ್ದಪ್ಪ ಪತ್ನಿ, ಪುತ್ರ ಹಾಗೂ ಪುತ್ರಿಯನ್ನ ಅಗಲಿದ್ದಾನೆ. ಈ ಘಟನೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಇದನ್ನೂ ಓದಿ : ಅಂಗಡಿ ಎಣ್ಣೆ ತಿಂದು ಆರೋಗ್ಯ ಕೆಡಿಸಿಕೊಳ್ಳುವುದಕ್ಕಿಂತ ಈ ಗಾಣದ ಎಣ್ಣೆ ಬಳಸಿ..!
Post Views: 81