ಬೆಂಗಳೂರು : ಪ್ರಧಾನಿ ಮೋದಿ ಒಂದು ವರ್ಷ ಚಿನ್ನ ಖರೀದಿಸಬೇಡಿ ಎಂದು ದೇಶದ ಜನತೆಗೆ ಕರೆ ನೀಡಿದ ಬೆನ್ನಲ್ಲೇ ಬಂಗಾರದ ದರದಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ದೆಹಲಿ, ಮುಂಬೈ ಹಾಗೂ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ 10 ಗ್ರಾಂಗೆ 1,52,990 ರೂಪಾಯಿ ಆಗಿದೆ. ದಕ್ಷಿಣ ಭಾರತದಲ್ಲಿ ಚೆನ್ನೈನಲ್ಲಿ ಚಿನ್ನ ದುಬಾರಿಯಾಗಿದೆ. ಚೆನ್ನೈನಲ್ಲಿ 10 ಗ್ರಾಂಗೆ 1,53,320 ರೂಪಾಯಿ ಆಗಿದೆ. ಬಳಿಕ ಹೈದರಾಬಾದ್ನಲ್ಲಿ 1,53,110 ರೂಪಾಯಿ ಆಗಿದೆ. ಮೂರು ನಗರಗಳ ಪೈಕಿ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಕೊಂಚ ಕಡಿಮೆ ಇದೆ.
ನಗರಗಳಲ್ಲಿ ಚಿನ್ನದ ಬೆಲೆ
ಹೈದರಾಬಾದ್ – 1,53,110 ರೂ.
ಬೆಂಗಳೂರು – 1,52,990 ರೂ.
ಮುಂಬೈ – 1,52,870 ರೂ.
ದೆಹಲಿ – 1,52,610 ರೂ.
ಚೆನ್ನೈ – 1,53,320 ರೂ.
ಕೋಲ್ಕತಾ – 1,52,670 ರೂ.
ಬೆಳ್ಳಿ ಬೆಲೆ ವಿವಿಧ ನಗರಗಳಲ್ಲಿ (ಪ್ರತಿ ಕೆಜಿಗೆ)
- ಬೆಂಗಳೂರು – 2,62,100 ರೂ.
- ಮುಂಬೈ – 2,61,900 ರೂ.
- ದೆಹಲಿ – 2,61,440 ರೂ.
- ಚೆನ್ನೈ – 2,62,660 ರೂ.
- ಹೈದರಾಬಾದ್ – 2,62,310 ರೂ.
- ಕೋಲ್ಕಾತಾ – 2,61,550 ರೂ.
ಇದನ್ನೂ ಓದಿ : ಬೆಂಗಳೂರು ಸೇರಿ ಇಂದು ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ!
Author: Btv Kannada
Post Views: 310









