Download Our App

Follow us

Home » ಅಪರಾಧ » ತುಮಕೂರು : ಹುಡುಗಿ ವಿಚಾರಕ್ಕೆ ಕಾಲೇಜು ವಿದ್ಯಾರ್ಥಿಗಳ ನಡುವೆ ಕಿರಿಕ್ – ದೃಶ್ಯ ಸಿಸಿಟಿವಿಯಲ್ಲಿ ಸೆರೆ..!

ತುಮಕೂರು : ಹುಡುಗಿ ವಿಚಾರಕ್ಕೆ ಕಾಲೇಜು ವಿದ್ಯಾರ್ಥಿಗಳ ನಡುವೆ ಕಿರಿಕ್ – ದೃಶ್ಯ ಸಿಸಿಟಿವಿಯಲ್ಲಿ ಸೆರೆ..!

ತುಮಕೂರು : ಹುಡುಗಿ ವಿಚಾರಕ್ಕೆ ಕಾಲೇಜು ವಿದ್ಯಾರ್ಥಿಗಳ ನಡುವೆ ಕಿರಿಕ್ ನಡೆದ ಘಟನೆ ತುಮಕೂರು ನಗರದ ವಿದ್ಯಾನಿಧಿ ಪಿಯು ಕಾಲೇಜು ಬಳಿ ನಡೆದಿದೆ. ವಿದ್ಯಾರ್ಥಿಯೊಬ್ಬನಿಗೆ ಮನಬಂದಂತೆ ಹಲ್ಲೆ ನಡೆಸಿ ಪುಂಡಾಟ ಮರೆದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮನೋಜ್ ಹಾಗೂ ಗಣೇಶ್ ಎಂಬುವವರು 2nd ಪಿಯುಸಿ ಓದುತ್ತಿರುವ ಜಯವರ್ಧನ್ ಮೇಲೆ ಹಲ್ಲೆ ಮಾಡಿದ್ದಾರೆ. ಬೆಂಗಳೂರಿನ BMS ಕಾಲೇಜಿನಲ್ಲಿ ಡಿಗ್ರಿ ಮಾಡುತ್ತಿರುವ ಮನೋಜ್,
ಕಾಲೇಜಿನಲ್ಲಿ ವಿದ್ಯಾರ್ಥಿಯೊಬ್ಬಳನ್ನ ಪ್ರೀತಿಸುತ್ತಿದ್ದನು.

ಆ ಹುಡುಗಿ ಜೊತೆ ಜಯವರ್ಧನ್ ಮಾತನಾಡ್ತಾನೆ ಎಂಬ ವಿಚಾರಕ್ಕೆ ಮನೋಜ್​​ ಪೋನ್​ನಲ್ಲಿ ಬೆದರಿಕೆ ಹಾಕಿದ್ದನು. ಅಲ್ದೇ ಕಾಲೇಜು ಬಳಿ ಬಂದು ಗಣೇಶ್ ಎಂಬಾತನ ಜೊತೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ಮಾಡುತ್ತಿದ್ದನ್ನ ನೋಡಿದ ಕಾಲೇಜಿನ ಬಸ್ ಚಾಲಕರು, ಮನೋಜ್​ನನ್ನ ಹಿಡಿದು ಕಾಲೇಜು ಪ್ರಾಂಶುಪಾಲರಿಗೆ ಒಪ್ಪಿಸಿದ್ದಾರೆ. ಈ ವೇಳೆ ಜತೆಗೆ ಇದ್ದ ಸ್ನೇಹಿತ ಗಣೇಶ್ ನಾಪತ್ತೆಯಾಗಿದ್ದಾನೆ. ಇನ್ನು ಘಟನೆಯ ಸಂಬಂಧ ಜಯವರ್ಧನ್ ಪೋಷಕರಿಂದ ಮನೋಜ್ ವಿರುದ್ಧ ತುಮಕೂರಿನ NEPS ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ : ಕೋಟಿ ಕೋಟಿ ಇನ್ಶೂರೆನ್ಸ್ ಹಣಕ್ಕೆ ಅಮಾಯಕನನ್ನು ಕೊಲೆಗೈದ ದಂಪತಿ – ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ..!

Leave a Comment

DG Ad

RELATED LATEST NEWS

Top Headlines

MLA ಮುನಿರತ್ನ ವಿರುದ್ಧ ರೇಪ್ ಆರೋಪದ ಬೆನ್ನಲ್ಲೇ ಮಾಜಿ ಕಾರ್ಪೊರೇಟರ್ ಪತಿಯ ಹನಿಟ್ರ್ಯಾಪ್ ವಿಡಿಯೋ ವೈರಲ್..!

ಬೆಂಗಳೂರು : ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ಏಳು ಮಂದಿಯ ವಿರುದ್ಧ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ

Live Cricket

Add Your Heading Text Here