Download Our App

Follow us

Home » ಅಪರಾಧ » ಕೋಟಿ ಕೋಟಿ ಇನ್ಶೂರೆನ್ಸ್ ಹಣಕ್ಕೆ ಅಮಾಯಕನನ್ನು ಕೊಲೆಗೈದ ದಂಪತಿ – ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ..!

ಕೋಟಿ ಕೋಟಿ ಇನ್ಶೂರೆನ್ಸ್ ಹಣಕ್ಕೆ ಅಮಾಯಕನನ್ನು ಕೊಲೆಗೈದ ದಂಪತಿ – ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ..!

ಹಾಸನ : ಕೋಟಿ ಕೋಟಿ ಇನ್ಶೂರೆನ್ಸ್ ಹಣಕ್ಕೆ ಅಮಾಯಕನನ್ನು ಸಿನಿಮಾ ಸ್ಟೈಲ್​ನಲ್ಲಿ ಕೊಲೆ ಮಾಡಿ, ಅಪಘಾತವೆಂದು ಬಿಂಬಿಸಿ ನಾಟಕವಾಡಿದ್ದ ಖತರ್ನಾಕ್ ದಂಪತಿಯನ್ನು ಗಂಡಸಿ ರಾಣೆ ಪೊಲೀಸರು ಬಂಧಿಸಿದ್ದಾರೆ. ಹತ್ತು ದಿನಗಳ ನಂತರ ಸಿನಿಮೀಯ ಮಾದರಿ ಕೊಲೆ ಪ್ರಕರಣದ ರಹಸ್ಯ ಬಯಲಾಗಿದೆ.

ಆಗಸ್ಟ್​ 12ರಂದು ಗೊಲ್ಲರಹೊಸಳ್ಳಿ ಗೇಟ್ ಬಳಿ ಲಾರಿ ಡಿಕ್ಕಿಯಾಗಿ ಓರ್ವ ವ್ಯಕ್ತಿ ಮೃತಪಟ್ಟಿದ್ದ. ಸ್ಥಳದಲ್ಲಿದ್ದ ಕಾರಿನ ಆಧಾರದಲ್ಲಿ ಪೊಲೀಸರು ಮೃತನ ಗುರುತು ಪತ್ತೆ ಹಚ್ಚಿದ್ದರು. ಶಿಲ್ಪರಾಣಿ ಎಂಬುವವರು ಆ.13ರಂದು ಜಿಲ್ಲಾಸ್ಪತ್ರೆಗೆ ಬಂದು ಶವದ ಗುರುತು ಪತ್ತೆ ಹಚ್ಚಿದ್ದರು. ಈ ಮೃತದೇಹ ನನ್ನ ಪತಿ ಮುನಿಸ್ವಾಮಿಗೌಡರದ್ದು ಎಂದು ಕಣ್ಣೀರು ಹಾಕಿದ್ದರು. ಆ.13 ರಂದು  ಚಿಕ್ಕಕೋಲಿಗ ಗ್ರಾಮದಲ್ಲಿ ಅಂತ್ಯಸಂಸ್ಕಾರ ಕೂಡ ನಡೆಸಲಾಗಿತ್ತು. ಇಷ್ಟೆಲ್ಲ ಆದ ನಂತರ ಮೃತ ವ್ಯಕ್ತಿಯ ಕುತ್ತಿಗೆಯಲ್ಲಿದ್ದ ಗಾಯದ ಗುರುತು ಕಂಡು ಅನುಮಾನಗೊಂಡ ಪೊಲೀಸರು ತೀವ್ರ ತನಿಖೆಗೆ ನಡೆಸಲು ಮುಂದಾದರು. ಈ ವೇಳೆ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಹೊಸಕೋಟೆಯಲ್ಲಿ MRF ಟೈರ್ ಅಂಗಡಿ ಇಟ್ಟುಕೊಂಡಿದ್ದ ಮುನಿಸ್ವಾಮಿ ಗೌಡ, ಸಾಕಷ್ಟು ಸಾಲ ಮಾಡಿಕೊಂಡಿದ್ದನು. ಈ ಸಾಲ ತೀರಿಸಲು ಖತರ್ನಾಕ್ ಪ್ಲಾನ್ ಮಾಡಿದ ಮುನಿಸ್ವಾಮಿ ಗೌಡ ಹಾಗೂ ಹೆಂಡತಿ ಶಿಲ್ಪರಾಣಿ ಮುನಿಸ್ವಾಮಿಯನ್ನೆ ಹೋಲುವ ವ್ಯಕ್ತಿಯನ್ನು ಹುಡುಕಿದ್ದರು.

ಆತನನ್ನು 15 ದಿನ ಮನೆಯಲ್ಲೆ ಇರಿಸಿಕೊಂಡಿದ್ದ ದಂಪತಿ, ಆಗಸ್ಟ್​ 12 ರಂದು ವ್ಯಕ್ತಿಯನ್ನು ಕಾರಿನಲ್ಲಿ ಕರೆದುಯ್ದು ಗೊಲ್ಲರಹೊಸಳ್ಳಿ ಬಿಟ್ಟಿದ್ರು. ತಕ್ಷಣ ವೇಗವಾಗಿ ಬಂದ ಲಾರಿಯಿಂದ ಆ ವ್ಯಕ್ತಿಗೆ ಗುದ್ದಲಾಗಿತ್ತು. ಸತ್ತವನ ಜೇಬಲ್ಲಿ ಮುನಿಸ್ವಾಮಿ ಆದಾರ್ ಕಾರ್ಡ್ ಇಟ್ಟು ಅಲ್ಲಿಂದ ಮುನಿಸ್ವಾಮಿ ಮತ್ತು ಲಾರಿ ಚಾಲಕ ಎಸ್ಕೇಪ್​ ಆಗಿದ್ರು.

ಇತ್ತ ಪತಿ ಕಳೆದುಕೊಂಡ ನೋವಿನಲ್ಲಿ ಇದ್ದಂತೆ ಪತ್ನಿ ಶಿಲ್ಪರಾಣಿ ಕೂಡ ನಾಟಕವಾಡಿದ್ದಳು. ಮುಂದೇನು ಮಾಡಬೇಕೆಂದು ತಿಳಿಯದೆ ಆರೋಪಿ ಮುನಿಸ್ವಾಮಿ ತನ್ನ ಸಂಬಂಧಿ ಇನ್ಸ್ಪೆಕ್ಟರ್ ಒಬ್ಬರ ಮುಂದೆ ಹಾಜರಾಗಿ, ನಡೆದ ಘಟನೆ ವಿವರಿಸಿ ರಕ್ಷಣೆಗೆ ಅಂಗಲಾಚಿದ್ದ.

ಆ ಇನ್ಸ್ಪೆಕ್ಟರ್, ಮುನಿಸ್ವಾಮಿ ಮಾಹಿತಿ ಬಳಿಕ ಗಂಡಸಿ ಪೊಲೀಸರಿಗೆ ಮಾಹಿತಿ ನೀಡಿದ್ದು ಕೂಡಲೇ ಆರೋಪಿಯನ್ನ ಬಂಧಿಸಲಾಗಿದೆ. ಶಿಶಿಡ್ಲಘಟ್ಟ ಇನ್ಸ್​ಪೆಕ್ಟರ್​ ಕೊಟ್ಟ ಮಾಹಿತಿ ಮೇಲೆ  ಆರೋಪಿಯನ್ನು ಬಂಧಿಸಲಾಗಿದೆ. ಸದ್ಯ ಗಂಡ ಹೆಂಡತಿ ಇಬ್ಬರನ್ನೂ ವಿಚಾರಣೆ ನಡೆಸುತ್ತಿರೋ ಗಂಡಸಿ ಪೊಲೀಸರು, ಮುನಿಸ್ವಾಮಿ ಬದುಕಿರುವಾಗ ಸತ್ತವನು ಯಾರೆಂದು ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಕಲಬುರಗಿ : ಕಲ್ಲಿನ ಪರ್ಸಿಗಳನ್ನ ತುಂಬಿದ್ದ ಲಾರಿ ಪಲ್ಟಿ – ಹಲವರಿಗೆ ಗಂಭೀರ ಗಾಯ..!

Leave a Comment

DG Ad

RELATED LATEST NEWS

Top Headlines

ವೇದಿಕೆಯಲ್ಲಿ ಕಣ್ಣೀರಿಟ್ಟ ಸಮಂತಾರನ್ನು ಅಪ್ಪಿಕೊಂಡು ಸಮಾಧಾನಿಸಿದ ಆಲಿಯಾ..!

ಹೈದರಾಬಾದ್ : ಬಾಲಿವುಡ್​ ನಟಿ ಆಲಿಯಾ ಭಟ್ ಹಾಗೂ ಸಮಂತಾ ರುತ್ ಪ್ರಭು ಹೈದರಾಬಾದ್​ನಲ್ಲಿ ನಿನ್ನೆ ನಡೆದ ಜಿಗ್ರಾ ಸಿನಿಮಾದ ಗ್ರ್ಯಾಂಡ್ ಪ್ರಿ ರಿಲೀಸ್ ಇವೆಂಟ್​ನಲ್ಲಿ ಒಟ್ಟಿಗೆ

Live Cricket

Add Your Heading Text Here